ಶಿವಾಜಿ ಸುರತ್ಕಲ್ 2 ಚಿತ್ರದ ಯಶಸ್ಸನ್ನು ಬಹಳ ಮೆಚ್ಚಿದ ಮಹಾರಾಜರಾದ ಶ್ರೀ ಯದುವೀರ್ ಒಡೆಯರ್
Posted date: 06 Sat, May 2023 05:47:09 PM

ರಮೇಶ್ ಅರವಿಂದ್ ರವರ 102 ನೇ ಚಿತ್ರ ಶಿವಾಜಿ ಸುರತ್ಕಲ್ - ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಅದರ ಓಟ ಭರ್ಜರಿಯಾಗಿ ಸಾಗುತ್ತಿದೆ. ಇನ್ನಷ್ಟು ಸಿಂಗಲ್ ಸ್ಕ್ರೀನ್ ಗಳು ಚಿತ್ರದ ಪ್ರದರ್ಶನಕ್ಕೆ ಸೇರ್ಪಡೆಯಾಗಿದೆ. ಚಿತ್ರದ ವಿತರಕರಾದ ಕೆ ಆರ್ ಜಿ ಸ್ಟೂಡಿಯೋಸ್ ಸಂಪೂರ್‍ಣವಾಗಿ ಬೆಂಬಲಿಸುತ್ತಿದ್ದಾರೆ. ಚಿತ್ರದ ಈ ಯಶಸ್ಸಿನ ನಡುವೆ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಹಾಗೂ ನಿರ್ಮಾಪಕರಾದ ಅನೂಪ್ ಗೌಡ ಮೈಸೂರಿನ ಮಹಾರಾಜರಾದ ಶ್ರೀ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿದ್ದಾರೆ. ಮಹಾರಾಜರು ಚಿತ್ರದ ಯಶಸ್ಸನ್ನು ಬಹಳ ಮೆಚ್ಚಿ, ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ರಮೇಶ್ ಅರವಿಂದ್ ರವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದು ಚಿತ್ರ ತಂಡಕ್ಕೆ, ತಮ್ಮ ಯಶಸ್ಸಿಗೆ ಮತ್ತೊಂದು ಗರಿ ಸೇರಿದಂತಾಗಿದೆ. ಚುನಾವಣೆಯ ಹಾಗೂ ಐ ಪಿ ಎಲ್ ನ ಭರದಲ್ಲಿ ಚಿತ್ರಕ್ಕೆ ಈ ಮಟ್ಟದ ಯಶಸ್ಸು ಸಿಕ್ಕಿರುವುದು ಗಮನಾರ್ಹ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed