``ನೋಡು ಶಿವ`` ಅದ್ದೂರಿ ಆಲ್ಬಂ ಸಾಂಗ್.
Posted date: 11 Thu, Feb 2021 09:21:39 AM

ಸುಮಿತ್ ಹಾಗೂ ಮೇಘ ಶೆಟ್ಟಿ ಜೊತೆ ಹೆಜ್ಜೆಹಾಕಿದ ಚಂದನ್ ಶೆಟ್ಟಿ.
ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಆದರೆ ಅಪಾರ ವೆಚ್ಚ ಹಾಗೂ ಅದ್ದೂರಿ ತಾರಾಗಣದಲ್ಲಿ ``ನೋಡು ಶಿವ`` ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಸುಮಿತ್ ಎಂ.ಕೆ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.  ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಈ ಆಲ್ಬಂ ನಲ್ಲಿ ನಟಿಸಿರುವ ಸುಮಿತ್ ಎಂ.ಕೆ ಈ ಹಿಂದೆ "ಪರಾರಿ" ಚಿತ್ರ ನಿರ್ಮಿಸಿದ್ದರು.‌
ಸುಮಿತ್ ಅವರೆ ಗೀತ ರಚನೆ ಮಾಡಿದ್ದು,  ಚಂದನ್ ಶೆಟ್ಟಿ ಸಂಗೀತ ನೀಡಿ, ಇಂಪಾಗಿ ಹಾಡಿದ್ದಾರೆ.
ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ‌ ಆಲ್ಬಂ ‌ಸಾಂಗ್ ನಲ್ಲಿ ಅಭಿನಯಿಸಿದ್ದು,‌ ಕನ್ನಡದ ಮಟ್ಟಿಗೆ ಇಷ್ಟು ಅದ್ದೂರಿಯಾಗಿ‌ ಮೂಡಿಬಂದಿರುವ ಮೊದಲ‌‌ ಆಲ್ಬಂ ಸಾಂಗ್ ಇದು ಅಂದರೆ ತಪ್ಪಾಗಲಾರದು.
ಇತ್ತೀಚೆಗೆ ಬನ್ನೇರುಘಟ್ಟ ‌ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ.
ಎಂ.ಕೆ‌ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ‌ ಕಲ್ಲುರಿ ಅವರು  ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.‌ ಹೆಬ್ಬುಲಿ ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣ ಈ ಆಲ್ಬಂ ಸಾಂಗ್ ನ ಅಂದ ಮತ್ತಷ್ಟು ಹೆಚ್ಚಿಸಿದೆ.
ಮೂರುವರೆ ನಿಮಿಷಗಳ‌ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ‌ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed