ಬಹುಮುಖ ಪ್ರತಿಭೆ ಕನ್ನಡ ಅಲ್ಲದೆ ಬೇರೆ ಭಾಷೆಗಳ ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಬಾಲಾಜಿ ಮನೋಹರ್ ಹೀಗ "ತತ್ಸಮ ತದ್ಭವ" ಚಿತ್ರದಲ್ಲಿ ಸಿದ್ದಾರ್ಥ್ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ....
"ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ".
- ಬಾಲಾಜಿ ಮನೋಹರ್.
ಇತ್ತೀಚೆಗಷ್ಟೇ ಮೇಘನರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ, ಚಿತ್ರತಂಡ ಈಗ ಬಾಲಾಜಿ ಮನೋಹರ್ ಅವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆ ಮಾಡಿದೆ.