ಸರ್ಕಾರಿ ಶಾಲೆಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರ ಸರ್ಕಾರಿ ಶಾಲೆ ಹೆಚ್.8. ಹಿರಿಯನಟ ರಾಘವೇಂದ್ರ ರಾಜ್ಕುಮಾರ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ಹಾಗೂ ನಿರ್ದೇಶಕನೂ ಆದ ಗುಣ ಮಾತನಾಡುತ್ತ ನಾನು ಬೇಸಿಕಲಿ ಒಬ್ಬ ಎಂಜಿನಿಯರ್, ನಮ್ಮ ಚಿತ್ರದ ಒಂದು ಲೈನ್ ಕಥೆಯನ್ನು ರಾಘಣ್ಣ ಅವರಿಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಎಂದು ಇಷ್ಟಪಟ್ಟರು, ಚಿತ್ರದಲ್ಲಿ ಇಂಪಾರ್ಟೆಂಟ್ ಪಾತ್ರವೊಂದನ್ನು ಅವರು ನಿರ್ವಹಿಸುತ್ತಿದ್ದು, ಅವರೇ ಟೈಟಲ್ ಲಾಂಚ್ ಮಾಡಿಕೊಟ್ಟರು. ಚಿತ್ರದಲ್ಲಿ ಸ್ವಸ್ತಿಕ್ ಚಿತ್ರಕ್ಕಿಂತ ಬೇರೆ ಲೆವೆಲ್ನಲ್ಲಿ ಬೇರೆ ಲೆವೆಲ್ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತನ್ನ ಡೈಲಾಗ್ಗಳ ಮೂಲಕವೇ ವೈರಲ್ ಆದ ನವಾಜ್ ಅವರು ಫಸ್ಟ್ ಟೈಮ್ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್.8 ಎನ್ನುವುದರ ಮೆಲೆ ನಮ್ಮ ಇಡೀ ಚಿತ್ರದ ಕಥೆ ನಿಂತಿದೆ. ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗೂ ಅಭಿನಯಿಸುತ್ತಿದ್ದೇನೆ. ಸರ್ಕಾರಿ ಶಾಲೆಯ ಪರ ದನಿ ಎತ್ತುವ ವ್ಯಕ್ತಿ. ಬರುವ ಮೇನಿಂದ ಆರಂಭಿಸಿ ಶಿವಮೊಗ್ಗ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಸುತ್ತ ೬೦ ದಿನಗಳ ಕಾಲ ಚಿತ್ರೀಕರಣ ಮಾಡುತ್ತಿದ್ದೇವೆ. ಚಿತ್ರದಲ್ಲಿ ಸುಮಾರು ೫೦೦ ರಿಂದ ೮೦೦ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಂತರ ನವಾಜ್ ಮಾತನಾಡುತ್ತ ಗುಣ ಅವರು ನಮ್ಮ ಏರಿಯಾದವರು. ನಿಮ್ಮದು ರೋಷ ತುಂಬಿದ ಹುಡುಗನ ಕ್ಯಾರೆಕ್ಟರ್ ಎಂದಷ್ಟೇ ನನ್ನ ಪಾತ್ರದ ಬಗ್ಗೆ ಹೇಳಿದ್ದಾರೆ ಎಂದರು. ಮತ್ತೊಬ್ಬ ನಟ ರುತ್ವಿಕ್ ಮಾತನಾಡುತ್ತ ಪ್ರಭಾತ್ ತಂಡದಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದೇನೆ. ಇತ್ತೀಚೆಗೆ ಬಂದ ಪಾಲಾರ್ ಚಿತ್ರ ಅಲ್ಲದೆ ಕೆಲ ಸೀರಿಯಲ್ ಗಳನ್ನೂ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ಸಿಂಪಲ್ ಮಿಡಲ್ ಕ್ಲಾಸ್ ಹಾಗೂ ಹೋರಾಟದ ಮನೋಭಾವ ಇರುವ ಯುವಕನ ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿದರು, ಗಿರಿಚಂದ್ರ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ಶ್ರೀನಾಥ್ ಮತ್ತು ಇಂದುಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣ್ ಕುಮಾರ್ ಬಿ. ಮತ್ತು ಹೇಮಂತ್ ಬಿವಿ ಸಂಭಾಷಣೆ ಬರೆಯುತ್ತಿದ್ದಾರೆ.