`ಅದ್ಧೂರಿ ಆಲ್ಬಂ ಹಾಡಿಗೆ ಸಿದ್ಧವಾಗುತ್ತಿದೆ ವೇದಿಕೆ` ಮೋನಿಕಾ ಕಲ್ಲೂರಿ ಆರ್ಟ್ಸ್​ ಬ್ಯಾನರ್​ನಲ್ಲಿ ನಿರ್ಮಾಣ*
Posted date: 28 Sat, Nov 2020 12:55:49 PM
ಮೋನಿಕಾ ಕಲ್ಲೂರಿ ಆರ್ಟ್ಸ್​ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಇದೀಗ ಆಲ್ಬಂ ಸಾಂಗ್​ವೊಂದು ಸಿದ್ಧವಾಗುತ್ತಿದೆ. ‘ನೋಡು ಶಿವ..’ ಶೀರ್ಷಿಕೆಯ ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡನ್ನೂ ಹಾಡಿದ್ದಾರೆ. ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ಮಾಡುವುದರ ಜತೆಗೆ ಹಾಡಿನಲ್ಲಿಯೂ ಲೀಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಏನೆಂದರೆ, ಈ ಹಾಡಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್​​ ಆಗಿ ಹೆಜ್ಜೆ ಹಾಕಲಿದ್ದಾರೆ. ಸ್ಪೇಷಲ್ ಅಪೀಯರೆನ್ಸ್ ಆಗಿ ಚಂದನ್ ಶೆಟ್ಟಿ ಸಹ ಇರಲಿದ್ದಾರೆ. 
ಎಎಂಸಿ ಸಿಟಿ ಗ್ರೂಪ್​ ಆಫ್​ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ವೈಸ್ ಪ್ರೆಸೆಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಮೋನಿಕಾ, ‘ನೋಡು ಶಿವ ಎಂದೇ ಹಾಡು ಶುರುವಾಗಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡ್ತಾನೆ.. ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ’ ಎನ್ನುತ್ತಾರೆ.
ಈ ಹಾಡಿನ ನಿರ್ಮಾಣದ ಮುಖ್ಯ ಉದ್ದೇಶವನ್ನೂ ನಿರ್ಮಾಪಕಿ ಮೋನಿಕಾ ವಿವರಿಸಿದ್ದಾರೆ. ‘ಕನ್ನಡದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಅದ್ಧೂರಿಯಾದ ಹಾಡನ್ನು ನಾವು ಚಿತ್ರೀಕರಿಸಲಿದ್ದೇವೆ. ಆಲ್ಬಂ ಹಾಡಿನ ವಿಚಾರದಲ್ಲಿ ಕನ್ನಡದಲ್ಲಿ ಈ ಹಿಂದೆಂದೂ ಆಗದ ಒಂದು ಹೊಸತನವನ್ನು ಈ ಹಾಡಿನಲ್ಲಿ ತೋರಿಸಲಿದ್ದೇವೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸಲಿದೆ. ಸರಿಸುಮಾರು 30ಲಕ್ಷ ಬಜೆಟ್ ನಲ್ಲಿ ಈ ಹಾಡು ಸಿದ್ದವಾಗಲಿದೆ.’ ಎಂಬುದು ಮೋನಿಕಾ ಮಾತು. 
ಹಾಡಿನ ಸಾಹಿತ್ಯ ಕೇಳಿ ಇಷ್ಟಪಟ್ಟು ಕೇವಲ ಎರಡೇ ತಾಸಿನಲ್ಲಿ ಚಂದನ್​ ಶೆಟ್ಟಿ ಕಂಪೋಸ್ ಮಾಡಿ, ಧ್ವನಿಯನ್ನೂ ನೀಡಿದ್ದಾರೆ. ಕಳೆದೊಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಜನ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡಾನ್ಸರ್​ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್​ನಲ್ಲಿಯೇ ಶೂಟಿಂಗ್​ ಮುಗಿಸಿಕೊಳ್ಳುವ ಪ್ಲಾನ್​ ತಂಡದ್ದಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇನ್ನು ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾ, ಮೊದಲಿಂದಲೂ ಕಲೆಯತ್ತ ಆಸಕ್ತಿ. ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಅಂದಹಾಗೆ,ಡಿಸೆಂಬರ್ ವೇಳೆಗೆ ಆನಂದ್ ಆಡಿಯೋದಲ್ಲಿ ಈ ಹಾಡು ಬಿತ್ತರವಾಗಲಿದೆ.

--


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಅದ್ಧೂರಿ ಆಲ್ಬಂ ಹಾಡಿಗೆ ಸಿದ್ಧವಾಗುತ್ತಿದೆ ವೇದಿಕೆ` ಮೋನಿಕಾ ಕಲ್ಲೂರಿ ಆರ್ಟ್ಸ್​ ಬ್ಯಾನರ್​ನಲ್ಲಿ ನಿರ್ಮಾಣ* - Chitratara.com
Copyright 2009 chitratara.com Reproduction is forbidden unless authorized. All rights reserved.