`ಬಂಗಾರ‍್ದ ಕುರಲ್` ತುಳು ಚಿತ್ರ
Posted date: 25 Wed, Jan 2012 ? 04:41:23 PM

ಸುಮಾರು ೨೯ವರ್ಷಗಳ ನಂತರ ತುಳು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಹಿರಿಯ ನಿರ್ದೇಶಕ, ನಿರ್ಮಾಪಕ ರಾಮ್‌ಶೆಟ್ಟಿ ಅವರು ಆನಂದ್ ಫ಼ಿಲಂಸ್ ಮೂಲಕ ಮೂರನೇ ತುಳು ಚಿತ್ರವಾಗಿ ‘ಬಂದಾರ‍್ದ ಕುರಲ್ ಎಂಬ ತುಳು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ತಮ್ಮ ಮಗ ಆನಂದ್‌ನನ್ನು ಕೂಡ ತುಳು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.
      ಬಜ್ಪೆ-ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನ, ಮಂಗಳೂರು-ಮೂಡಬಿದ್ರೆ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸುಂಕದಕಟ್ಟೆ ಶ್ರೀಅಂಬಿಕಾಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಲ್ಲಿನ ಶ್ರೀನಿರಂಜನಸ್ವಾಮಿ ಪದವಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಚಿತ್ರದ ನಾಯಕಿ ಪಾಕೀ ಹೆಗ್ಡೆ ಹಾಡಿಗೆ ಭರ್ಜಿರಿಯಾಗಿ ಕುಣಿದಿದ್ದರು. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
     ಚಿತ್ರದಲ್ಲಿ ಏಳು ಹಾಡುಗಳಿವೆ. ಒಂದಕ್ಕಿಂತ ಒಂದು ಹಾಡು ಅದ್ಭುತವಾಗಿದೆ. ಅವೆಲ್ಲವುಗಳನ್ನೂ ಪ್ರಕೃತಿ ರಮಣೀಯ ಮತ್ತು ಭಕ್ತಿ ಹುಟ್ಟಿಸುವ ಸ್ಥಳಗಳಲ್ಲಿ ರಾಮ್ ಶೆಟ್ಟಿ ಚಿತ್ರೀಕರಣ ನಡೆಸಿದ್ದಾರೆ. ಮೂಡುಬಿದಿರೆಯಲ್ಲಿರುವ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ವೀಕ್ಷಿಸಿದ ಅಮರನಾಥ ಶೆಟ್ಟಿ ಅವರು ರಾಮ್ ಶೆಟ್ಟಿ ಅವರ ಸಿನಿಮಾ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ.
     ಚಿತ್ರದ ನಾಯಕರಾಗಿ ಹಿರಿಯ ನಟ ಶಿವಧ್ವಜ್ ಅಭಿನಯಿಸಿದ್ದಾರೆ. ಹಿರಿಯ ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರರ ಸಾಹಿತ್ಯವಿರುವ ಚಿತ್ರದ ತಾರಾಬಳಗದಲ್ಲಿ ಶಿವಧ್ವಜ್, ಪಾಕೀ ಹೆಗ್ಡೆ, ನಮೃತಾ ಹೆಗ್ಡೆ, ಸುರೇಶ್ ಮಂಗಳೂರು, ಹರೀಶ್‌ವಾಸು ಶೆಟ್ಟಿ ಮುಂಬಾಯಿ, ವಿಜಯ್‌ಕುಮಾರ್ ಶೆಟ್ಟಿ ಮುಂಬಾಯಿ, ಅರವಿಂದ್ ಬೋಳಾರ್, ಶೋಭಾ ರೈ, ಚಂಚಲಾಕ್ಷಿ, ಜ್ಯೋತಿ ರೈ, ರವಿ ಸುರತ್ಕಲ್, ಪ್ರದೀಪ್ ಚಂದ್ರ, ದಿನೇಶ್ ಅತ್ತಾವರ್, ಪ್ರದೀಪ್ ಆಳ್ವಾ, ಕಿಶೋರಿ ಬಲ್ಲಾಳ್, ಇಂದಿರಾ ಶೇಖರ್, ತಮ್ಮಲಕ್ಷ್ಮಣ್ ಮುಂತಾದವರಿದ್ದಾರೆ.
    ವಿ.ಮನೋಹರ್ ಸಂಗೀತವಿರುವ ಈ ಚಿತ್ರಕ್ಕೆ ರಾಜು.ಕೆ.ಜಿ ಅವರ ಛಾಯಾಗ್ರಹಣವಿದೆ. ರಾಮ್ ಶೆಟ್ಟಿ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಮಚ್ಚೇಂದ್ರನಾಥ ಪಾಂಡೇಶ್ವರ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹರೀಶ್ ಶೆಟ್ಟಿ ಸಾಹಸ ನಿರ್ದೇಶನ, ಮದನ್ ಹರಿಣಿ ನೃತ್ಯ ನಿರ್ದೇಶ, ತಮ್ಮ ಲಕ್ಷ್ಮಣ ಕಲಾ ನಿರ್ದೇಶನ, ನಾಸಿರ್ ಹಕೀಂ ಸಂಕಲನ ಹಾಗೂ ಶಿವಾರ್ಜುನ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
     ಖ್ಯಾತ ಸಾಹಸ ನಿರ್ದೇಶಕ ರಾಮ್‌ಶೆಟ್ಟಿ ೨೯ವರ್ಷಗಳ ನಂತರ ತುಳು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಿಂದಿಯಲ್ಲಿ ಖತರ್‌ನಾಕ್, ಮರಾಠಿಯಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ್ದ ರಾಮ್‌ಶೆಟ್ಟಿ ಡಾ:ರಾಜಕುಮಾರ್, ಡಾ:ವಿಷ್ಣುವರ್ಧನ್ ಮೊದಲಾದ ಕಲಾವಿದರ ಚಿತ್ರಗಳಿಂದ ಹಿಡಿದು ಈಗಿನ ಪುನೀತ್‌ರಾಜಕುಮಾರ್, ಶಿವರಾರಾಜಕುಮಾರ್ ಮುಂತಾದ ಕಲಾವಿದರ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ತುಳುವಿನಲ್ಲಿ ದಾರೆದ ಸೀರೆ, ಬದ್ಕೆರೆ ಬುಡ್ಲೆ ಸಿನಿಮಾ ನಿರ್ಮಿಸಿದ್ದಾರೆ. ಈಗ ಮಗ ಆನಂದ್ ಶೆಟ್ಟಿ ಅವರನ್ನು ಖಳಪಾತ್ರದ ಮೂಲಕ ತುಳು ಚಿತ್ರರಂಗಕ್ಕೆ ಪರಿಚಯಿಸಿ ‘ಬಂದಾರ‍್ದ ಕುರಲ್ ಸಿನಿಮಾ ನಿರ್ದೇಶಿಸಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಬಂಗಾರ‍್ದ ಕುರಲ್` ತುಳು ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.