`ರಾಜಲಕ್ಷ್ಮೀ`ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 21 Thu, Nov 2019 11:22:01 AM

ಎಸ್.ಕೆ.ಎಂ ಮೂವೀಸ್ ಲಾಂಛನದಲ್ಲಿ ಮೋಹನ್ ಕುಮಾರ್ ಎಸ್.ಕೆ ಅವರು ನಿರ್ಮಿಸಿರುವ ‘ರಾಜಲಕ್ಷ್ಮೀ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಾಗರಾಜಮೂರ್ತಿ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕಾಂತರಾಜ್ ಬರೆದಿದ್ದಾರೆ. ಕಿರಣ್-ಅರ್ಜುನ್ ಸಂಕಲನ, ನವೀನ್ ಕನ್ನಡಿಗ ನೃತ್ಯ ನಿರ್ದೇಶನ, ಸಂಕರ್ ಶಾಸ್ತ್ರಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಗಡಿ ಯತೀಶ್ ಸಂಭಾಷಣೆ ಬರೆದಿದ್ದಾರೆ.

ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ನವೀನ್ ತೀರ್ಥಹಳ್ಳಿ, ರಶ್ಮಿಗೌಡ, ಚಂದ್ರಪ್ರಭ(ಮಜಾಭಾರತ), ಸ್ಟೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಜಲಕ್ಷ್ಮೀ`ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.