`ಶಿವ` ನಾಳೆಯಿಂದ ಬಿಡುಗಡೆ
Posted date: 27 Thu, Feb 2020 02:42:07 PM

`ಶಿವ’ ಕನ್ನಡ ಚಲನಚಿತ್ರ ಆರ್ ವಿ ಕೆ ಕ್ರಿಯೇಷನ್ ನಿರ್ಮಾಣದಲ್ಲಿ ರಾಜ್ಯಾದ್ಯಂತ ನಾಳೆಯಿಂದ  ಬಿಡುಗಡೆ ಆಗುತ್ತಿದೆ. ಇದರಲ್ಲಿ ರೌದ್ರ, ರೋಚಕ ಹಾಗೂ ರಮಣೀಯ ಅಂಶಗಳನ್ನು ನಿರ್ದೇಶಕರು ಹಾಗೂ ನಟರು ಆದ ರಘು ವಿಜಯ್ ಕಸ್ತೂರಿ ಅವರು ಸೇರಿಸಿದ್ದಾರೆ. ಮಂಡ್ಯ ಸೊಗಡಿನ ಭಾಷೆಯನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳುವುದೇ ಅಲ್ಲದೆ ಚಿತ್ರಕ್ಕೆ ೨೫ ಹೊಸ ಕಲಾವಿದರು ಸಹ ಅಭಿನಯ ಮಾಡಿದ್ದಾರೆ. ಇದು ಅಸಲಿಗೆ ಲೋಕಲ್ ರೌಡಿ ಹಾಗೂ ಅವನ ಲವ್ ಸಂಬಂದಪಟ್ಟ ವಿಚಾರವಿದೆ. ರಘು ವಿಜಯ್ ಕಸ್ತೂರಿ ಜೊತೆಗೆ ಧರಣಿ ಕಥಾ ನಾಯಕಿ. ವಿಕ್ರಮ್ ಯಶೋಧರ, ನಿಶಾಂತ್, ಬೇಬಿ ಸಾಂವಿ, ಪಲ್ಲವಿ ಉಮೇಶ್, ಸತೀಶ್, ಗೀತಾ, ರಂಜನ್ ಶೆಟ್ಟಿ, ಶ್ರೀವತ್ಸ, ಚೇತನ್ ರಾವ್, ಭೂಪತಿ, ಮಂಜು, ಸೂರ್ಯ, ಉಮೇಶ್ ಕೋಟೆ ಸಹ ಕಲಾವಿದರಾಗಿ ಅಭಿನಯಿಸಿದ್ದಾರೆ. ಸತೀಶ್ ಬಾಬು ಹಿನ್ನಲೆ ಸಂಗೀತ, ರಮೇಶ್ ರಾಜ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ರಾಮ್ ದೇವ್ ಸಾಹಸ ಈ ‘ಶಿವ’ ಚಿತ್ರಕ್ಕೆ ಒದಗಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಶಿವ` ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.