`ಸಿಗ್ನೇಚರ್` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 10 Thu, May 2018 12:54:18 PM
ವಿರಾಟ್ ಪ್ರೊಡಕ್ಷನ್ಸ್ ಹಾಗೂ ಎಂ.ಎಂ.ಕೆ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಪೂರ್ಣಿಮಾ ಭಾಸ್ಕರ್ ತೆಕ್ಕೆಟ್ಟ ಅವರು ನಿರ್ಮಿಸುತ್ತಿರುವ ‘ಸಿಗ್ನೇಚರ್‘ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕುಂದಾಪುರ, ಮರವಂತೆ, ತೆಕ್ಕೆಟ್ಟ ಮುಂತಾದ ಕಡೆ ಚಿತ್ರಕ್ಕೆ ಹತ್ತು ದಿನಗಳ ಕಾಲ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಮಯೂರಿ, ರಂಜಿತ್, ಬೇಬಿ ಮಾನ್ಯ, ಬಚ್ಚನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು. 
 ಗುರು ಮದ್ಲೇಸರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ಜೀವನ್ ಗೌಡ ಛಾಯಾಗ್ರಹಣ, ವಿಶ್ವ ಸಂಕಲನ ಹಾಗೂ ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜೇಶ್ ಸಂಭಾಷಣೆ ಬರೆದಿದ್ದಾರೆ. ವಿ.ಮನೋಹರ್, ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ. 
ರಂಜಿತ್, ಮಯೂರಿ, ಸುಧಾರಾಣಿ, ಬೇಬಿ.ಮಾನ್ಯ, ಸೂರ್ಯಕಿರಣ್, ಸುನೀಲ್ ಪುರಾಣೀಕ್, ಗಿರೀಶ್ ಜತ್ತಿ, ಪಚ್ಚಿ ಆತೂರು, ಬಚ್ಚನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸಿಗ್ನೇಚರ್` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.