`ತರ್ಲೆ ನನ್ ಮಕ್ಕ್ಲು` ಪ್ರಾರಂಭ
Posted date: 16 Mon, Sep 2013 08:55:09 AM

‘ತರ್ಲೆ ನನ್ ಮಕ್ಲು’ಗಳಿಗೆ ಫ್ರೀಡಂ ಸಿಕ್ಕಿತು! ಅದು ಹ್ಯಾಗೆ! ನಗರದ ಜನನಿಬಿಡ ಪ್ರದೇಶದಲ್ಲಿ ನೆಳಸಿರುವ ಫ್ರೀಡಂ ಪಾರ್ಕ್ ಅಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಕೆಲವು ದಿವಸಗಳ ಹಿಂದೆ ಈ ಚಿತ್ರದ ಹಾಡುಗಳ ಸಂಯೋಜನೆಗೆ ಚಾಲನೆ ಸಿಕ್ಕಿತ್ತು.

ಅಂದಿನ ಮುಹೂರ್ತ ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್, ನಿರ್ದೇಶಕ ನಟ ಪ್ರೇಮ್, ಲವ್ಲಿ ಸ್ಟಾರ್ ಪ್ರೇಂಕುಮಾರ್, ಡೈಮಂಡ್ ಸ್ಟಾರ್ ಕಿಟ್ಟಿ, ಅಜಯ್ ರಾವು, ಕೋಮಲ್ ಕುಮಾರ್, ವಾಣಿಜ್ಯಮಂಡಲಿ ಅಧ್ಯಕ್ಷ ಬಿ ವಿಜಯಕುಮಾರ್, ಶಂಕರ್ ಹಾಗೂ ಇತರರು ಪಾಲ್ಗೊಂಡಿದ್ದರು.

1992 ರಲ್ಲಿ ಬಂದಂತಹ ‘ತರ್ಲೆ ನನ್ ಮಗ’ ಚಿತ್ರ ಉಪೇಂದ್ರ ನಿರ್ದೇಶನದಲ್ಲಿ ಹಾಗೂ ಜಗ್ಗೇಶ್ ಅವರ ನಟನೆಯಲ್ಲಿ ಈಗ ಅದು ‘ತರ್ಲೆ ನನ್ ಮಕ್ಕ್ಲು’ ಆಗಿದೆ. ಚಿತ್ರದ ಮೊದಲ ವಿಶೇಷ ಅಂದರೆ ಉಪೇಂದ್ರ ಹಾಗು ಜಗ್ಗೇಶ್ ಅವರು ಈ ಚಿತ್ರಕ್ಕೆ ತಲಾ ಒಂದು ಹಾಡನ್ನು ಹೇಳುತ್ತಿದ್ದಾರೆ. ಇದೆ ಅಲ್ಲದೆ ಐವರು ನಿರ್ದೇಶಕರು ಬರೆದ ಹಾಡನ್ನು ಐವರು ನಾಯಕರು ಹಾಡು ಹೇಳುತ್ತಿದ್ದಾರೆ.

ನಿರ್ದೇಶಕರಾದ ಡಾಕ್ಟರ್ ವಿ ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ, ಜಗ್ಗೇಶ್, ನೆನಪಿರಲಿ ಪ್ರೇಂಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಲಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರ ಪುತ್ರ ಯತಿರಾಜ್, ನಾಗಶೇಖರ್, ಹೊಸ ಹುಡುಗ ಪ್ರಜ್ವಲ್ ಹಾಗೂ ಅಂಜನ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.

ಅಂದಹಾಗೆ ಹೊಸ ಕನಸುಗಳನ್ನು ಹೊತ್ತು ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತ್ತಿದ್ದಾರೆ. ಸಚ್ಚಿದಾನಂದ್ ಮತ್ತು ಸುರೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರುಗಳು.

ಈ ಚಿತ್ರದ ಮುಖಾಂತರ ಸೂರ್ಯವಂಶಿ –ಡೀಜೆ ಅದವರು ಸಂಗೀತ ನಿರ್ದೇಶನಕ್ಕೆ ಆಗಮಿಸಿದ್ದಾರೆ. ಜೇರಾಲ್ಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed