`ಸವಾಲ್` ಮಾತು ಮುಗೀತು
Posted date: 29 Mon, Apr 2013 08:47:23 AM

ಶ್ರೀ ತಿರುಮಲಾ ಮೂವಿ ಮಕೇರ್ಸ್ ಅವರ ‘ಸವಾಲ್’ ಮಾತುಗಳ ಭಾಗದ ಚಿತ್ರೀಕರಣವನ್ನು ಮುಗಿಸಿದ್ದು. ನಾಲ್ಕುಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳನ್ನು ಬಾಕಿ ಉಳಿಸಿಕೊಂಡಿದೆ. ಸದ್ಯಕ್ಕೆ ಮಾತುಗಳ ಜೋಡಣೆಗೆ ಸಂಕಲನ ಕೆಲವ ಪ್ರಾರಂಭವಾಗಿದೆ.

‘ಸವಾಲ್’ ಶೀರ್ಷಿಕೆ ಕೇಳಿದ ತಕ್ಷಣ ಅದೆಂತಹ ಸವಾಲು ಎಂಬುವುದು ಮನೆ ಮಾಡುವುದು ಗ್ಯಾರಂಟಿ – ಅದು ನಾಯಕ ಕೋರ್ಟಿನ ಕತಕತೆಯಲ್ಲಿ ಹಾಕುವ ಸವಾಲುಗಳಿಗೆ ನೀಡುವ ಜವಾಬ್ ಆಗಿರುತ್ತದೆ. ಅಂತಹ ಪರಿಸ್ಥಿಯ ಪಿತೂರಿ ನಾಯಕನನ್ನು ಬಾದಿಸುವುದಿದೆ. ಶಕ್ತಿ ಹಾಗೂ ಯುಕ್ತಿ ಒಂದು ಕೈ ಮೇಲೆ ಆದ ನಾಯಕ ಎಲ್ಲವನ್ನೂ ಸಕತ್ತಾಗೆ ಎದುರಿಸಿ ಜಯಶಾಲಿಯಾಗುತ್ತಾನೆ. ಅವನಿಗೆ ಬಂದೊದಗುವ ಸಂದರ್ಭಗಳು ಏನು ಎಂಬುದೇ ಚಿತ್ರದ ಕುತೂಹಲದ ಘಟ್ಟ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ವಕೀಲನಾಗಿ ಅಭಿನಯಿಸುತ್ತಿದ್ದಾರೆ. ಸೋನ ಚಿತ್ರದ ನಾಯಕಿ, ಮುತುರಾಜ್, ಶೋಬಾರಾಜ್, ಅಭಯ್, ಮನೋಹರ್, ರಾಜ್ ಕೆ ಪುರೋಹಿತ್, ರೇಖ ದಾಸ್, ಸಾಧು ಕೋಕಿಲ, ಬುಲ್ಲೆಟ್ ಪ್ರಾಕಾಶ್, ರಾಜು ತಾಳಿಕೋಟೆ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಉಮೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಭೂಮಿ ತಾಯಿಯ ಸೇವೆಯಲ್ಲಿ ತೊಡಗಿ ರೈತನಾಗಿರುವ, ಪಂಚಾಯತಿ ಸದಸ್ಯರು ಆಗಿರುವ  ಕೆ ತಿಮ್ಮರಾಜು ಅವರ ಸಹೋದರ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಧನಂಜಯ ಬಾಲಾಜಿ ಅವರದು.

ವಿ ಮನೋಹರ್ ಅವರ ಸಂಗೀತ, ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣ, ಧನಂಜಯ ಬಾಲಾಜಿ, ಕೆ ವೆಂಕಟೇಶ್, ಪ್ರತಾಪ್, ವಿಶ್ವ, ರಾಜು ಅವರ ಸಂಭಾಷಣೆ, ಮನೋಹರ್, ಯೋಗರಾಜ್ ಭಟ್, ಅಪ್ಪು, ಧನಂಜಯ ಬಾಲಾಜಿ ಅವರ ಗೀತ ಸಾಹಿತ್ಯ, ವಿನೋದ್ ಮನೋಹರ್ ಅವರ ಸಂಕಲನ, ಬಾಬು ಖಾನ್ ಅವರ ಕಲೆ, ಡಿಫರೆಂಟ್ ಡ್ಯಾನಿ, ಶಿವು ಅವರ ಸಾಹಸ, ಮುರಳಿ, ರಾಮು, ಸುರೇಶ್, ಮನು ಅಕುಳ್ ಅವರ ನೃತ್ಯ ಸಂಯೋಜನೆ, ಗಂಡಸಿ ನಾಗರಾಜ್ ಅವರ ವಸ್ತ್ರ ವಿನ್ಯಾಸ ‘ಸವಾಲ್’ ಚಿತ್ರಕ್ಕೆ ಇದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed