`ಶಿವಾಜಿನಗರ` ಅಂತಿಮ ಘಟ್ಟ
Posted date: 16 Mon, Sep 2013 08:35:03 AM

ರಾಮು ಫಿಲ್ಮ್ ಅವರ ಶಿವಾಜಿನಗರ ಬಿರುಸಿನಿಂದ ಚಿತ್ರೀಕರಣ ಮಾಡಿ ಇದೀಗ ಸಾಹಸ ಸನ್ನಿವೇಶ ಹಾಗೂ ಕೆಲವು ಹಾಡುಗಳನ್ನು ಬಾಕಿ ಉಳಿಸಿಕೊಂಡಿದೆ. ಮಾತುಗಳ ಬಾಗದ ಚಿತ್ರೀಕರಣ ಸಂಪೂರ್ಣವಾಗಿದೆ ಎಂದು ನಿರ್ದೇಶಕ ಪಿ ಎನ್ ಸತ್ಯ ಅವರು ತಿಳಿಸುತ್ತಾರೆ.

 

ಅಂದು ಕಲಾಸಿಪಾಳ್ಯ2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ ಶಿವಾಜಿನಗರ’. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ ಘೂಳಿನಿರ್ದೇಶನ ಮಾಡಿದ್ದರು, ನಾಯಕ ನಟ ವಿಜಯ್ ಕಂಠೀರವಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು.

 

ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed