ಆನಂದ ಗುರೂಜಿಯವರು ಬೃಹತ್ ಶನೈಶ್ಚರ ಮಹಾಯಾಗ
Posted date: 02 Mon, Mar 2020 08:43:50 AM

ಸತತ ಐದುವರೆ ವರ್ಷಗಳಿಂದಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಸಾರವಾಗುತ್ತಿರುವ  ಮಹರ್ಷಿವಾಣಿ ಕಾರ್ಯಕ್ರಮವು ಡಾ.ಮಹರ್ಷಿ ಆನಂದ ಗುರೂಜಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಮೂಡಿಬರುತ್ತಿದೆ. ಈಗೀಗಂತೂ ಇದರಲ್ಲಿ ಹೇಳುವ ಉಪಯುಕ್ತ ಧಾರ್ಮಿಕ ಸಲಹೆಗಳು ಹಲವರ ಬಾಳಲ್ಲಿ ಹೊಸ ಬಳಕನ್ನು ಮೂಡಿಸಿವೆ. ಹಾಗಾಗಿಯೇ ಇದು ನಾಡಿನ ಪ್ರತಿ ಮನೆಯಲ್ಲೂ ಹೆಸರುವಾಸಿಯಾಗಿದೆ.   

ಜೀವನದಲ್ಲಿ ಬೀಳುವ ಪೆಟ್ಟುಗಳಿಂದ ನೊಂದು ಬೆಂದವರ ಧ್ವನಿಗೆ ಆಶಾಭಾವನೆ ತುಂಬಿ ಅವರ ಬದುಕಿನಲ್ಲಿ ಮತ್ತೆ ನವಚೇತನ ನೀಡುವ ಮೂಲಕ ಜೀವನವನ್ನು ಧೈರ್ಯದಿಂದ ಎದುರಿಸಿ ಬಾಳಬೇಕೆಂಬ ನೀತಿಪಾಠವನ್ನು ಪ್ರತಿನಿತ್ಯ ಜನರಿಗೆ ತುಂಬುತ್ತಿದ್ದಾರೆ. ಈ ಮೂಲಕ ಕಿರಿಯರಿಂದ ಹಿರಿಯರವರೆಗೆ ನಾಡಿದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಹರ್ಷಿ ಆನಂದ ಗುರೂಜಿಯವರು ಹೇಳುವ  ಪ್ರತಿಯೊಂದು  ಮಾತುಗಳಲ್ಲಿ ಒಂದು ಅರ್ಥವಿರುತ್ತದೆ. ಸಮಸ್ಯೆ ಹೊತ್ತ ಎಲ್ಲರಿಗೂ ಏಕಕಾಲದಲ್ಲಿ ಪರಿಹಾರ ನೀಡುವುದು ಅಸಾಧ್ಯ.  ಅದಕ್ಕಾಗಿಯೇ ಮಹರ್ಷಿ ಆನಂದ ಗುರೂಜಿಯವರು ಆಗಾಗ ಯಾಗಗಳನ್ನು ನಡೆಸಿ ಸಾಮೂಹಿಕ ಪ್ರಾರ್ಥನೆಯ ಮೂಲಕ ಲಕ್ಷಾಂತರ ಜನರನ್ನು ಒಟ್ಟಿಗೆ ಸೇರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸತ್ಕಾರ್ಯ ಮಾಡುತ್ತಲೇ ಬಂದಿzರೆ. ಅವರು ನಡೆಸಿದ ಪ್ರತಿ ಯಾಗಗಳಿಗೆ ಲಕ್ಷಾಂತರ ಜನ ಭಕ್ತಾದಿಗಳು ಸೇರಿ ಅದ್ಭುತ ಯಶಸ್ಸನ್ನು ತಂದುಕೊಟ್ಟಿದ್ದಾರೆ.

ಅಂತಹುದೇ ದೈವ ಸಾಕ್ಷಾತ್ಕಾರದ ಹಾದಿಯಲ್ಲಿ ಈಸಲ ಆನಂದ ಗುರೂಜಿಯವರು ತಮ್ಮ ಬ್ರಹ್ಮರ್ಷಿ ಆನಂದ ಸಿದ್ದಿಪೀಠ ಹಾಗೂ ಜೀ ಕನ್ನಡದ ವತಿಯಿಂದ ೧೨ ರಾಶಿಗಳು ಮತ್ತು ೨೭ ನPತ್ರದವರಿಗೆ ದೋಷ ಪರಿಹಾರ್ಥವಾಗಿ ಬೃಹತ್ ಶನೈಶ್ಚರ ಮಹಾಯಾಗವನ್ನು ಏರ್ಪಡಿಸಿzರೆ. ಮಾರ್ಚ ೦೭ರ ಶನಿವಾರ ಮತ್ತು ೦೮ರ ಭಾನುವಾರದಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ನವರತ್ನ ಅಗ್ರಹಾರ, ಸಾದೇನಹಳ್ಳಿ ಬಳಿ ಈ ಶನೈಶ್ಚರ ಮಹಾಯಾಗವು ನಡೆಯಲಿದ್ದು, ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಜೀ ಕನ್ನಡ ವಾಹಿನಿಯ ಮಹರ್ಷಿವಾಣಿ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ತಿಳಿಸುತ್ತಾ ಬಂದಿzರೆ.

ಶನೈಶ್ಚರನ ದೋಷದಿಂದ ಬಳಲುತ್ತಿರುವರು, ಅನೇಕ ವೈಯಕ್ತಿಕ ಸಮಸ್ಯೆಗಳಿಂದ ನರಳುತ್ತಿರುವವರು ಗುರೂಜಿಯವರು ನಡೆಸುತ್ತಿರುವ ಈ ಯಾಗದಲ್ಲಿ ಪಾಲ್ಗೊಂಡು ಶನೈಶ್ಚರನ ಕೃಪೆಗೆ ಪಾತ್ರಾರಾಗಬೇಕೆಂದು ಕೋರಿದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆನಂದ ಗುರೂಜಿಯವರು ಬೃಹತ್ ಶನೈಶ್ಚರ ಮಹಾಯಾಗ - Chitratara.com
Copyright 2009 chitratara.com Reproduction is forbidden unless authorized. All rights reserved.