ಈ ವಾರ ತೆರೆಗೆ ``ಕಲಾವಿದ``
Posted date: 11 Thu, Feb 2021 09:31:24 AM

ಪದ್ಮರಾಜ್ ಫಿಲಂಸ್ ನಿರ್ಮಿಸಿರುವ `ಕಲಾವಿದ` ಚಿತ್ರ ಈ ವಾರ ತೆರೆಗೆ ಬರಲಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಹೆಚ್.ಡಿ ನಿರ್ದೇಶಿಸಿದ್ದಾರೆ.‌
`ಕಲಾವಿದ` ಚಿತ್ರದ ನಾಯಕನಾಗಿ ಪ್ರದೀಪ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಪ್ರದೀಪ್ ಕುಮಾರ್ ಅವರೆ.
``ರಣರಣಕ`` ಸಿನಿಮಾದಲ್ಲಿ ನಟಿಸಿದ್ದ ಸಂಭ್ರಮ ಈ ಚಿತ್ರದ ನಾಯಕಿ.
ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ  ಮಲ್ಲೇಶ್, ಗೀತ( ಗುಂಡಮ್ಮ) ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿದಾನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ - ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ವೆಂಕಿ ಯು ಡಿ ವಿ ಸಂಕಲನ ಹಾಗೂ ಆರ್ಯ ರೋಷನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed