ಉಘೇಉಘೇ ಮಾದೇಶ್ವರ- 150
Posted date: 07 Sat, Mar 2020 09:01:42 AM

ಒಂದುದೈನಂದಿನಧಾರಾವಾಹಿ೧೫೦ಕಂತುಗಳುಪೂರೈಸಿದರೆಅದುಸಹಜ. ಆದರೆವಾರಾಂತ್ಯದಜಾನಪದಧಾರಾವಾಹಿಯೊಂದುಒಂದುಗಂಟೆಯ೧೫೦ಎಪಿಸೋಡುಪೂರೈಸಿಪ್ರಸಾರದಎರಡುವರ್ಷಪೂರೈಸುವತ್ತಧಾಪುಗಾಲಿಡುತ್ತಿದೆಎಂದರೆಕನ್ನಡಕಿರುತೆರೆಮಟ್ಟಿಗೆದಾಖಲೆ.

ಅಂಥಒಂದುದಾಖಲೆಯತ್ತಮುನ್ನುಗ್ಗುತ್ತಿದೆಜ಼ೀಕನ್ನಡವಾಹಿನಿಯವಾರಾಂತ್ಯಧಾರಾವಾಹಿʻಉಘೇಉಘೇಮಾದೇಶ್ವರʼ. ಸೆಪ್ಟೆಂಬರ್‌೮, ೨೦೧೮ ರಂದು ಪ್ರಸಾರ ಆರಂಭಗೊಂಡ ಧಾರಾವಾಹಿಈವಾರ೧೫೦ನೇಕಂತಿನೊಂದಿಗೆಒಂದೂವರೆವರ್ಷಪೂರೈಸುತ್ತಿದೆ.

ಕನ್ನಡದಜಾನಪದ ಸಂಪತ್ತುʻಮಾದೇಶ್ವರಮಹಾಕಾವ್ಯʼವನ್ನು ಜಗತ್ತಿನ ಅತಿದೊಡ್ಡ ಮೌಖಿಕ ಮಹಾಕಾವ್ಯವೆಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ಈ ಕಾವ್ಯ ಚಾಮರಾಜನಗರಜಿಲ್ಲೆಮಲೆಮಾದೇಶ್ವರಬೆಟ್ಟದಲ್ಲಿ ದೇವರಾಗಿ ನೆಲೆಸಿರುವಮಾದೇಶ್ವರರಕಥೆಯನ್ನುಹೇಳುತ್ತದೆ. ಇವರು ೧೫ ನೇ ಶತಮಾನದ ಪವಾಡಪುರುಷರು.ಗುಡ್ಡಗಾಡುಜನರಿಗೆಅಹಿಂಸೆಯಮಾರ್ಗದಲ್ಲಿಬದುಕುವದಾರಿತೋರಿಸಿದವರು. ಪ್ರಜೆಗಳಿಗೆಹಿಂಸೆನೀಡುತ್ತಿದ್ದರಾಜನನ್ನೇಉಪಾಯದಿಂದನಿವಾರಿಸಿದವರು. ಮಹಿಳೆಯರಆತ್ಮಗೌರವಹೆಚ್ಚುವಂತೆಮಾಡಿದರು. ಪ್ರಾಣಿಹಿಂಸೆ ನಿಲ್ಲಿಸಿದರು. ಬುಡಕಟ್ಟು ಜನರನ್ನು ಸಸ್ಯಾಹಾರಿಗಳನ್ನಾಗಿ ಮಾಡಿದರು. ಅವರಿಗೆ ಕೃಷಿ ಕಲಿಸಿದರು. ಎಲ್ಲರೂಸಮಾನಎಂದುನಿದರ್ಶನಗಳಮೂಲಕತೋರಿಸಿಕೊಟ್ಟರು.ದೀರ್ಘಸಂಚಾರಕೈಗೊಂಡುಸಮಾಜೋದ್ಧಾರಮಾಡಿದರು.

ಜನರುಅವರನ್ನುಶಿವನಅಂಶವೆಂದೇಪರಿಗಣಿಸಿಪೂಜಿಸುತ್ತಾರೆ. ಹಾಡುಗಳಮೂಲಕಅವರವೃತ್ತಾಂತಬಿತ್ತರಿಸುತ್ತಾರೆ. ಈಮಹಾಕಾವ್ಯದಲ್ಲಿಹತ್ತಾರುಕವಲುಗಳಿದ್ದುʻಸಾಲುಗಳುʼ ಎಂದುಕರೆಯಲಾಗಿದೆ. ಉಘೇ ಉಘೇ ಎನ್ನುವುದು ಮಾದೇಶ್ವರರಿಗೆ ಭಕ್ತರು ಹಾಕುವ ವಿಶಿಷ್ಟ ಜೈಕಾರ.

ʻಉಘೇ ಉಘೇ ಮಾದೇಶ್ವರʼ ೧೫೦ನೆಯ ಸಂಚಿಕೆಯಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮಾದೇಶ್ವರರ ಅವತರಣದ ಮೂಲ ಗುರಿ ಶ್ರವಣ ಸಂಹಾರಕ್ಕೆ ವೇದಿಕೆ ಸಜ್ಜಾಗುತ್ತದೆ. ಚರ್ಮದ ಪಾದರಕ್ಷೆಗಳನ್ನು ಮಾಡುವಮಹಾಶರಣ ಹರಳಯ್ಯನ ಸಾಲು ಆರಂಭವಾಗುತ್ತದೆ. ರಕ್ಕಸ ಶ್ರವಣನ ಸಂಹಾರ ಅವನ ಪಾದಗಳ ಮೂಲಕ ಆಗಬೇಕೆಂಬ ಅಭಿಶಾಪವಿದೆ. ಇದನ್ನು ಪೂರೈಸಲು ಮಾದಪ್ಪ ಹರಳಯ್ಯನ ನೆರವು ಪಡೆಯುತ್ತಾರೆ. ಮಾದಾರಿಯ ರೂಪದಲ್ಲಿ ಶ್ರವಣನ ಆಸ್ಥಾನ ಪ್ರವೇಶಿಸುತ್ತಾರೆ. ಇಲ್ಲಿಂದ ಮುಂದೆ ಶ್ರವಣನ ಸಂಹಾರದ ತನಕ ಪಯಣ ರೋಚಕ. ಶ್ರವಣ ಸಂಹಾರದ ನಂತರವೂ ಮಾದೇಶ್ವರರ ಕಥೆ ಸಾಕಷ್ಟಿದೆ.

"ಅನಿವಾರ್ಯಕಾರಣಗಳಿಂದಪ್ರಸಾರಸಮಯಬದಲಾವಣೆಗೊಂಡಾಗಲೂವೀಕ್ಷಕರುಅದೇಭಕ್ತಿ-ನಿಷ್ಠೆಯಿಂದಧಾರಾವಾಹಿವೀಕ್ಷಿಸುತ್ತಿದ್ದಾರೆ. ʻಉಘೇ ಉಘೇ ಮಾದೇಶ್ವರʼದ ಯಶಸ್ಸುಇನ್ನೂಇಂಥಅಚ್ಚಕನ್ನಡಕಥೆಗಳನ್ನುತೆರೆಗೆತರಲುಸ್ಫೂರ್ತಿಯಾಗಿದೆ" ಎನ್ನುತ್ತಾರೆಜೀಕನ್ನಡವಾಹಿನಿಯಬ್ಯುಸಿನೆಸ್‌ಹೆಡ್‌ರಾಘವೇಂದ್ರಹುಣಸೂರು.

"ಉತ್ತರಕರ್ನಾಟಕಹಾಗೂಕರಾವಳಿಭಾಗದಲ್ಲೂವೀಕ್ಷಕರುಹೆಚ್ಚಿದ್ದಾರೆ. ಕೌಟುಂಬಿಕಹಾಗೂನೈತಿಕಸ್ವಾಸ್ಥ್ಯಉಳಿಸುವಲ್ಲಿಧಾರಾವಾಹಿಸ್ಫೂರ್ತಿಯಾಗಿರುವನಿದರ್ಶನಗಳನ್ನುಕಂಡಾಗಸಾರ್ಥಕವೆನ್ನಿಸುತ್ತದೆ" ಎನ್ನುತ್ತಾರೆನಿರ್ಮಾಪಕ-ಪ್ರಧಾನನಿರ್ದೇಶಕಕೆ. ಮಹೇಶ್‌ಸುಖಧರೆ.

ಬುಕ್ಕಾಪಟ್ಣ ವಾಸು ನಿರ್ದೇಶನ, ಚಂದ್ರು ಛಾಯಾಗ್ರಹಣ, ಬಿ.ಎ.ಮಧು-ನಾಗಮಂಗಲ ಕೃಷ್ಣಮೂರ್ತಿಯವರ ಜಾನಪದ ನುಡಿಗಟ್ಟುಗಳ ಸಂಭಾಷಣೆ ಧಾರಾವಾಹಿಯ ಶ್ರೀಮಂತಿಕೆ ಹೆಚ್ಚಿಸಿವೆ.

ತಾರಾಗಣದಲ್ಲಿ ಮಾದೇಶ್ವರರಾಗಿ ಆರ್ಯನ್‌ರಾಜ್‌, ಶ್ರವಣದೊರೆಯಾಗಿ ವಿನಯ್‌ಗೌಡ, ಸಂಕವ್ವನಾಗಿ ಹರ್ಷಿಲಾ, ನೀಲೇಗೌಡನಾಗಿ ಪ್ರಸನ್ನ, ಬೇಡರ ಕನ್ನಯ್ಯನಾಗಿ ನಾಗರಾಜ್‌ಶಿರಸಿ, ಶಿವನಾಗಿ ಶರತ್‌ಕ್ಷತ್ರಿಯ, ದುಂಡೇಗೌಡರಾಗಿ ಶಂಖನಾದ ಆಂಜನಪ್ಪ, ಕಿರುತೆರೆ-ರಂಗಭೂಮಿಯ ನೂರಾರು ಕಲಾವಿದರು ಧಾರಾವಾಹಿಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಶಿವಶರಣ ಹರಳಯ್ಯನಾಗಿ ಖ್ಯಾತ ಜಾನಪದ ಹಾಡುಗಾರ ಮೈಸೂರು ಗುರುರಾಜ್‌, ಪತ್ನಿ ಕಲ್ಯಾಣಿ ಪಾತ್ರದಲ್ಲಿ ನೀನಾಸಂ ಕಲಾವಿದೆ ಬಿಂದು ಕಾಣಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ ೫:೩೦ ಕ್ಕೆ ʻಉಘೇ ಉಘೇ ಮಾದೇಶ್ವರʼ ಪ್ರಸಾರವಾಗುತ್ತಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಘೇಉಘೇ ಮಾದೇಶ್ವರ- 150 - Chitratara.com
Copyright 2009 chitratara.com Reproduction is forbidden unless authorized. All rights reserved.