ಕಸ್ತೂರಿ ವಾಹಿನಿಯ ?ಸಪ್ತಸ್ವರ-೨ ಛಾಲೆಂಜಿಂಗ ಸ್ಟಾರ್? ಉಡುಪಿಯ ಕುಮಾರಿ ಶರಧಿ ಪಾಟೀಲ್.
Posted date: 26/November/2008
ಈಗ ಎಲ್ಲಾ ಚಾನೆಲ್ಲುಗಳಲ್ಲೂ ರಿಯಾಲಿಟಿ ಶೋಗಳದ್ದೇ ದರಬಾರು. ನಮ್ಮ ಹೆಮ್ಮೆಯ ಕಸ್ತೂರಿ ವಾಹಿನಿಯು ಇದಕ್ಕೆ ಹೊರತಲ್ಲ, ಈಗ ಕಸ್ತೂರಿ ವಾಹಿನಿಯಲ್ಲಿ ಶ್ರೀಸಾಯಿ ಗೋಲ್ಡ್ ಹಾಗೂ ಸ್ಯಾರಿ ಪ್ಯಾಲೆಸ್ ಅರ್ಪಿಸಿದ ಸಪ್ತಸ್ವರ-೨ ಚಾಲೆಂಜಿಂಗ್ ಸ್ಟಾರ್ ಎಂಬ ಚಿಣ್ಣರ ಮಹಾ ಸಂಗೀತ ಸಮರವು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ತಿಂಗಳ ೧೬ರರಂದು ಈ ಸ್ಪರ್ಧೆಯ ಅಂತಿಮ ಹಂತದ ಅದ್ದೂರಿ ಕಾರ್ಯಕ್ರಮವನ್ನು ನಮ್ಮ ಕಸ್ತೂರಿ ವಾಹಿನಿಯು ಆಯೋಜಿಸಿತ್ತು.

  ಹಲವಾರು ಹಂತಗಳಲ್ಲಿ ಸುಮಾರು ೩೨ ಜನ ಸ್ಪರ್ಧಿಗಳೊಂದಿಗೆ ವಿವಿಧ ಹಂತಗಳಲ್ಲಿಸ್ಪರ್ಧೆಯಲ್ಲಿತಮ್ಮ ಅದ್ಬುತ ಪ್ರತಿಭೆಯಿಂದ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಬೆಂಗಳೂರಿನ ಕುಮಾರಿ ಕವನ ಮತ್ತು ಉಡುಪಿಯ ಕುಮಾರಿ ಶರಧಿ ಪಾಟೀಲ್ ಫೈನಲ್ ಹಂತದಲ್ಲಿ ಮುಖಾಮುಖಿಯಾಗಿದ್ದರು. ಈ ಪ್ರತಿಷ್ಟಿತ ಕದನದಲ್ಲಿ ಜಯಮಾಲೆ ಯಾರ ಕೊರಳಿಗೆ ಎನ್ನುವ ಕುತೂಹಲ ಮಾತ್ರ ಎಲ್ಲರ ನಿರೀಕ್ಷೆಯಾಗಿತ್ತು.ಈ ಹಂತದಲ್ಲಿ ಉಡುಪಿಯ ಕುಮಾರಿ ಶರಧಿ ಪಾಟೀಲ್ ಹಾಸನದ ಜಿಲ್ಲಾಕ್ರೀಡಾಂಗಣದಲ್ಲಿ ಆಸಕ್ತ ಸುಮಾರು ೩೦ಸಾವಿರ ಪ್ರೇಕ್ಷಕರ ಮುಂದೆ ಅದ್ಬುತ ಪ್ರದರ್ಶನ ನೀಡುವುದರ ಮುಖಾಂತರ ಸಪ್ತಸ್ವರ-೨ರ ಚಾಲೆಂಜಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ.

  ರಂಗುರಂಗಿನ ಝಗಮಗಿಸುವ ಈ ರಂಗದ ಮೇಲೆ ಮಕ್ಕಳ ಗೀತೆಗಳ ಜೊತೆಗೆ ನಮ್ಮ ಕನ್ನಡದ ಚಿತ್ರರಂಗದ ನಾಯಕ-ನಾಯಕಿಯರು ಕುಣಿದು ಕುಪ್ಪಳಿಸಿದ್ದು ಈ ಸಮಾರಂಭದ ವೈಶಿಷ್ಠವಾಗಿತ್ತು.ಅದೇ ರೀತಿ ಹಾಸನದ ವಿವಿಧ ಕಾಲೇಜಿನ ನೃತ್ಯಗಾರರಿಗೂ ಇದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರಚುರ ಪಡಿಸಲು ವಾಹಿನಿ ಸ್ಥಳೀಯರಿಗೂ  ಅವಕಾಶ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಆರ್.ಪಿ. ಪಟ್ನಾಯಕ್ ಭಾಗವಹಿಸಿ ಸಮಾರಂಭಕ್ಕೆ ಹೆಚ್ಚಿನ ಕಳೆ ತಂದುಕೊಟ್ಟರು. ಇನ್ನುಳಿದಂತೆ ಎಂದಿನಂತೆ ತೀರ್ಪುಗಾರರಾಗಿ ಶ್ರೀಯುತ ರಾಮ್ ಪ್ರಸಾದ್ ಮತ್ತು ಶ್ರೀಮತಿ ಚಂದ್ರಿಕಾ ಗುರುರಾಜ್ ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಇದೇ ನವಂಬರ್ ೩೦ರಂದು ರಾತ್ರಿ ೮:೩೦ ರಿಂದ೯:೩೦ರವರೆಗೂ ಕಸ್ತೂರಿವಾಹಿನಿಯಲ್ಲಿ ಪ್ರಸಾರವಾಗಲಿದೆ. 
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಸ್ತೂರಿ ವಾಹಿನಿಯ ?ಸಪ್ತಸ್ವರ-೨ ಛಾಲೆಂಜಿಂಗ ಸ್ಟಾರ್? ಉಡುಪಿಯ ಕುಮಾರಿ ಶರಧಿ ಪಾಟೀಲ್. - Chitratara.com
Copyright 2009 chitratara.com Reproduction is forbidden unless authorized. All rights reserved.