ಕೋಮಲ್ ಕುಮಾರ್ ಅಭಿನಯದ 2020 ಆರಂಭ
Posted date: 23 Mon, Nov 2020 08:05:54 PM

ಚಿತ್ರದ ಶೀರ್ಷಿಕೆ ಅನಾವರಣದ ಪ್ರೋಮೋ‌ ಬಿಡುಗಡೆಯನ್ನು ವಿಭಿನ್ನವಾಗಿ ಮಾಡಿ ಗಮನ ಸೆಳೆದ  ಚಿತ್ರ
 2020 .
 ಕೋಮಲ್ ಕುಮಾರ್ ನಾಯಕನಟರಾಗಿ ಅಭಿನಯಿಸುತ್ತಿರುವ  ಈ ಚಿತ್ರದ ಮುಹೂರ್ತ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
 ಅಯೋಗ್ಯ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್.‌ಚಂದ್ರಶೇಖರ್ ಅವರು ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.
ನಿರ್ಮಾಪಕರ‌ ಪುತ್ರ  ನಂದಕಿಶೋರ್ ಚಿತ್ರದ ಮೊದಲ‌ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಟಿ.ಆರ್.ಚಂದ್ರಶೇಖರ್ ಅವರು ಕ್ಯಾಮೆರಾ ಚಾಲನೆ ಮಾಡಿದರು.
 ಕೋಮಲ್ ಕುಮಾರ್, ಧನ್ಯ, ಬಾಲಕೃಷ್ಣ, ಕುರಿ ಪ್ರತಾಪ್, ತಬಲಾ ನಾಣಿ, ಗಿರಿ, ಅಪೂರ್ವ  ಇತರರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಬರ್ಟ್, ವಿಕ್ಟರಿ2, ಅಮ್ಮ ಐ ಲವ್ ಯು,ತ್ರಿಬಲ್ ರೈಡಿಂಗ್,ಉಪಾಧ್ಯಕ್ಷ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕೆ.ಎಲ್.ರಾಜಶೇಖರ್ ಈ  ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.

 2020 ನವಂಬರ್ ಕೊನೆಯಲ್ಲಿ 2020 ಚಿತ್ರದ  ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರಿನಲ್ಲೇ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ.

ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನವೀನ್ ಕುಮಾರ್ .ಎಸ್ ಛಾಯಾಗ್ರಹಣ ಹಾಗೂ ಕೆ,ಎಮ್,ಪ್ರಕಾಶ್ ಸಂಕಲನವಿದೆ. ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಮೆರಗು ನೀಡಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೋಮಲ್ ಕುಮಾರ್ ಅಭಿನಯದ 2020 ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.