ಜೂನ್ 14 ರಂದು `ಸಿಂಗ` ಚಿತ್ರದ ಥೇಟ್ರಿಕಲ್ ಟ್ರೇಲರ್ ಬಿಡುಗಡೆ
Posted date: 05 Wed, Jun 2019 09:56:32 AM

ಯು ಕೆ ಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ ‘ಸಿಂಗ‘ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅದಕ್ಕೂ ಮುನ್ನ ಚಿತ್ರದ  ಥೇಟ್ರಿಕಲ್ ಟ್ರೇಲರ್(ಚಿತ್ರಮಂದಿರಗಳಲ್ಲಿ) ಜೂನ್೧೪ ಬಿಡುಗಡೆಯಾಗಲಿದೆ.

ಈ ಹಿಂದೆ ‘ರಾಮ್‌ಲೀಲಾ‘ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ನಿರ್ದೇಶನ, ಡಾ||ಕೆ.ರವಿವರ್ಮ, ಪಳನಿರಾಜ್ ಸಾಹಸ ನಿರ್ದೇಶನ, ಗಣೇಶ್ ಸಂಕಲನ ಹಾಗೂ ಶಿವಾರ್ಜುನ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಡಾ||ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ‘ಸಿಂಗ‘ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೂನ್ 14 ರಂದು `ಸಿಂಗ` ಚಿತ್ರದ ಥೇಟ್ರಿಕಲ್ ಟ್ರೇಲರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.