ಜ್ಯುವೆಲ್ಲರಿ ಶೋಗಾಗಿ ಅಪ್ಸರೆಯಂತೆ ಮಿಂಚಿದ ಮಾಲಾಶ್ರೀ ಪುತ್ರಿ ಆರಾಧನಾ
Posted date: 10 Wed, Jul 2024 01:22:03 PM
`ಕಾಟೇರಾ` ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ನಟಿ ಮಾಲಶ್ರೀ ಅವರ ಪುತ್ರಿ ಆರಾಧನಾ ಇದೀಗ ಕಲರ್ ಫುಲ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾದಲ್ಲಿ ಆರಾಧನಾ ಸುಂದವಾಗಿ ಸೆರೆಯಾಗಿದ್ದಾರೆ.

ಸೂಪರ್ ಸಕ್ಸಸ್ ಸಿನಿಮಾ ಮೂಲಕವೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಆರಾಧನಾ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. 

ಶಾರುಖ್ ಖಾನ್, ಐಶ್ವರ್ಯ ರೈ, ಸಲ್ಮಾನ್, ಹೃತಿಕ್ ಹೀಗೆ ಅನೇಕ ಪ್ರಖ್ಯಾತ ಬಾಲಿವುಡ್ ಕಲಾವಿದರ ಸುಂದರ ಫೋಟೋಗಳನ್ನು ಕ್ಯಾಪ್ಚರ್ ಮಾಡಿರುವ ಡಬೂ ರತ್ನಾನಿ ಇದೀಗ ಕನ್ನಡದ ಕಲಾವಿದೆಯನ್ನು ತಮ್ಮ ಕ್ಯಾಮರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿರುವುದು ಹೆಮ್ಮೆಯ ವಿಚಾರವಾಗಿದೆ.

ಅಂದಹಾಗೆ ಆರಾಧನಾ ರಾಣಿಯಂತೆ ಕಂಗೊಳಿಸುತ್ತಿರುವುದು ದಿ ಜ್ಯುವೆಲ್ಲರಿ ಶೋಗಾಗಿ. ವೆರೈಟಿ ಕಾಸ್ಟೂಮ್ ನಲ್ಲ ಹೆವಿ ಜ್ಯುವೆಲ್ಲರಿ ಧರಿಸಿ ತರಹೇವಾರಿ ಲುಕ್ ನಲ್ಲಿ ಮಿಂಚಿದ್ದಾರೆ. 

ಪುತ್ರಿ ಆರಾಧನಾ ಜೊತೆ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮರಾಗೆ ಮಾಸ್ತ್ ಪೋಸ್ ನೀಡಿದ್ದಾರೆ. ಅಮ್ಮ ಮಗಳ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್‌‌.. ಎನ್ನುತ್ತಿದ್ದಾರೆ.

ಮೊದಲ ಬಾರಿಗೆ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾಗೆ ಪೋಸ್ ನೀಡಿರುವ  ಆರಾಧನಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನೂ  ಮಗಳ ಸುಂದರ ಫಸ್ ನೋಡಿ ಮಾಲಾಶ್ರೀ ಕೂಡ ಸಖತ್ ಕೂಡ ಖುಷಿಪಟ್ಟಿದ್ದಾರೆ.

ಕಾಟೇರ ಬಳಿಕ ಆರಾಧನಾ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಉತ್ತಮ ಸಿನಿಮಾಗಾಗಿ ಎದುರು ನೋಡುತ್ತಿರುವ ಆರಾಧನಾ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed