ಟೆಂಟ್​ ಶಾಲೆಯ ಸಿನಿಮಾ ವಿದ್ಯಾರ್ಥಿಗಳಿಂದ ಬೇಸ್ಡ್​ ಆನ್ ಎ ಟ್ರೂ ಸ್ಟೋರಿ ಕಿರುಚಿತ್ರ
Posted date: 23 Mon, Nov 2020 07:50:54 PM

ಇದು ನೈಜ ಕಥೆ! ಇದು ಕಾಕತಾಳೀಯವಲ್ಲ! ಈ ಪದಗಳಿಗೆ ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಮಾನ್ಯತೆ ಇದೆ. ನೈಜ ಕಥೆಗಳ ಹಿಂದೆ ಬಿದ್ದ ಹಲವಾರು ಯುವ ನಿರ್ದೇಶಕರು  ಪ್ರೇಕ್ಷಕನ ತಲೆಗೆ ಹುಳ ಬಿಟ್ಟಿದ್ದಾರೆ. ಈಗ ಅಂತಹದ್ದೇ ಒಂದು ನೈಜಕಥೆಯ ಎಳೆಯನ್ನು ಆಧರಿಸಿ ಟೆಂಟ್​ ಸಿನಿಮಾ ಶಾಲೆಯ ' ಡೈರೆಕ್ಷನ್ ಇನ್ ಫಿಲಂ ಮೇಕಿಂಗ್ ' ವಿದ್ಯಾರ್ಥಿಗಳು ' ಬೇಸ್ಡ್​ ಆನ್ ಎ ಟ್ರೂ ಸ್ಟೋರಿ' ಎನ್ನುವ ಪ್ರಯೋಗಾತ್ಮಕ ಕಿರುಚಿತ್ರವನ್ನು ಹೊರತಂದಿದ್ದಾರೆ.
ಮೇಕರ್ಸ್ ಪವರ್​ಹೌಸ್ ಟೆಂಟ್ ಸಿನಿಮಾ ಸ್ಕೂಲ್: ಟೆಂಟ್​ ಸಿನಿಮಾ ಶಾಲೆ ಕರ್ನಾಟಕದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಸಿನಿಮಾ ತರಬೇತಿ ಶಾಲೆಯಾಗಿದೆ. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದಲ್ಲಿ, ನಿರ್ದೇಶಕ ಜಯತೀರ್ಥ, ನಿರ್ದೇಶಕ ಆದರ್ಶ್ ಈಶ್ವರಪ್ಪ ಮತ್ತು ಅಭಯ್ ಸಿಂಹ, ಅಶೋಕ್  ಕಶ್ಯಪ್ ಮಾರ್ಗದರ್ಶನದಲ್ಲಿ ಹಲವಾರು ಸಿನಿಮಾ ವಿದ್ಯಾರ್ಥಿಗಳು ಈಗಾಗಲೇ ತರಬೇತಿ ಪಡೆದುಕೊಂಡಿದ್ದಾರೆ. ಚಿತ್ರಕಥೆ ರಚನೆಯಿಂದ ಹಿಡಿದು, ನಿರ್ದೇಶನ, ಸಿನಿಮಾಟೊಗ್ರಫಿ, ಎಡಿಟಿಂಗ್ ಕಲಿಸುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಕ್ರಿಯೆಟರ್, ಮೇಕರ್​​ ಸ್ಟ್ರೆಂತ್ ಏನು ಅನ್ನುವುದನ್ನು ಹೇಳಿಕೊಡುತ್ತಿದೆ ಟೆಂಟ್ ಸಿನಿಮಾ ಶಾಲೆ.
ವಿದ್ಯಾರ್ಥಿ ಅನಂತ್ ಚಂದ್ರ ಪಿಚ್ ಮಾಡಿದ ಒನ್ ಲೈನ್​ ಸ್ಟೋರಿಯನ್ನು ಆದರ್ಶ್ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಚಿತ್ರಕಥೆ ಹೆಣೆದಿದ್ದಾರೆ. ವಿದ್ಯಾರ್ಥಿಗಳೇ ಕಿರುಚಿತ್ರದ ಎಲ್ಲ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅಂದಹಾಗೆ ಟೆಂಟ್​ ಶಾಲೆಯಲ್ಲಿಯೇ ಸೆಟ್ ಹಾಕಿ ಕಾಮಿಡಿ ಶೈಲಿಯ ಈ ಕಿರುಚಿತ್ರಕ್ಕೆ ಆದರ್ಶ್ ಈಶ್ವರಪ್ಪ ಅವರು ನಿರ್ದೇಶನ ಮಾಡಿದ್ದಾರೆ. ವಿಶೇಷ ಏನೆಂದರೆ, ಇಡೀ ಕಿರುಚಿತ್ರವನ್ನು ಸಿಂಕ್ ಸೌಂಡ್ ಟೆಕ್ನಿಕ್ ಬಳಸಿ ಶೂಟಿಂಗ್ ಸ್ಪಾಟ್​ನಲ್ಲೇ ಧ್ವನಿಗ್ರಹಣ ಮಾಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಕಿರುಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡು, ಕೇವಲ ಆರು ಗಂಟೆಯಲ್ಲಿ ಶೂಟಿಂಗ್​ ಮಾಡಲಾಗಿದೆ.  
ಟೆಂಟ್​ ಸಿನಿಮಾ ಶಾಲೆ ಯ್ಯೂಟ್ಯೂಬ್​​ ಚಾನೆಲ್​ನಲ್ಲಿ  20 ನವೆಂಬರ್ ರಂದು ಕಿರುಚಿತ್ರವು  ಬಿಡುಗಡೆಯಾಗಿದೆ. 16 ಅವಧಿಯ ಕಿರುಚಿತ್ರವು ಯುವ ಸಿನಿಮಾಸಕ್ತರನ್ನು ಸೆಳೆಯುತ್ತಿದೆ. ಈ ಸಿನಿಮಾದ ಲಿಂಕ್-  https://m.youtube.com/watch?feature=youtu.be&v=HQzA0gDvOuY
ಕೋಟ್​
'ತುಂಬಾ ಡೆಡಿಕೇಟೆಡ್ ಬ್ಯಾಚ್​ ಜೊತೆ ಕೆಲಸ ಮಾಡಿದ್ದೇನೆ. ಈ ಬ್ಯಾಚ್​ ಸ್ಟೂಡೆಂಟ್ಸ್​​ ಕೂಡ ಬಹಳ ಉತ್ಸುಕರಾಗಿದ್ರು. ನಾನು ಸ್ಪಾಟ್​ನಲ್ಲಿ ಇರದಿದ್ರೂ ಜಸ್ಟ್ ಗೈಡ್ ಮಾಡಿದ್ದನ್ನು ಗಮನದಲ್ಲಿ ಇರಿಸಿಕೊಂಡು ಸೆಟ್ ಹಾಕಿದ್ರು. ಅಷ್ಟು ಡೆಡಿಕೇಷನ್ ಡೈರೆಕ್ಷನ್​ ಟೀಂನಲ್ಲಿರಬೇಕು. ಇದು ನನಗೆ ಇಷ್ಟವಾಯ್ತು'
| ಆದರ್ಶ್ ಈಶ್ವರಪ್ಪ, ನಿರ್ದೇಶಕ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟೆಂಟ್​ ಶಾಲೆಯ ಸಿನಿಮಾ ವಿದ್ಯಾರ್ಥಿಗಳಿಂದ ಬೇಸ್ಡ್​ ಆನ್ ಎ ಟ್ರೂ ಸ್ಟೋರಿ ಕಿರುಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.