ನ್ಯೂರಾನ್ಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
Posted date: 03 Mon, Dec 2018 11:49:47 PM

ಪ್ರೆಂಡ್ಸ್ ಪ್ರೊಡಕ್ಷನ್ ಲಾಂಚನದಲ್ಲಿ ತಯಾರಾಗುತ್ತಿರುವ ‘ನ್ಯೂರಾನ್‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸಕಲೇಶಪುರ, ಕೊಡಗು ಮುಂತಾದ ಕಡೆ ಚಿತ್ರಕ್ಕೆ ೨೫ ದಿನಗಳ ಚಿತ್ರೀಕರಣ ನಡೆದಿದೆ. ‘ಎಡಕಲ್ಲು ಗುಡ್ದ‘ ಚಿತ್ರದ ನಂತರ ಹುಚ್ಚಂಗಿ ಬೆಟ್ಟದ ಮೇಲೆ ‘ನ್ಯೂರಾನ್‘ ಚಿತ್ರದ ಚಿತ್ರೀಕರಣವಾಗಿರುವುದು ವಿಶೇಷ. ಜೈಜಗದೀಶ್, ಅರವಿಂದ್ ರಾಜ್, ಯುವ, ನೇಹಾ ಪಾಟೀಲ್, ವೈಷ್ಣವಿ ಮೆನನ್, ಶಿಲ್ಪಾ ಶೆಟ್ಟಿ, ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮಂಗಳೂರು ಮುಂತಾದವರು ಈ ಭಾಗದ   ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮಾತಿನ ಭಾಗದ ಚಿತ್ರೀಕರಣ ಸೇರಿದಂತೆ ಒಂದು ಹಾಡಿನ ಚಿತ್ರೀಕರಣ ಈ ಹಂತದಲ್ಲಿ ನಡೆದಿದೆ.     
ವಿಕಾಸ್ ಪುಷ್ಪಗಿರಿ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಹಿಂದೆ  ಡೇಂಜರ‍್ಝೋನ್ ಮತ್ತು ನಿಶ್ಯಬ್ದ-೨ ಚಿತ್ರಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕಾಸ್‌ಗೆ ನ್ಯೂರಾನ್ ಮೊದಲ ನಿರ್ದೇಶನದ ಚಿತ್ರ.
ಈ ಚಿತ್ರದ ಮೂಲಕ ಯುವ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಮಕೃಷ್ಣ, ಜೈಜಗದೀಶ್, ಅರವಿಂದರಾಜ್, ವರ್ಷ, ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮಂಗಳೂರು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರೇ ಚಿತ್ರಕತೆ ಬರೆದಿದ್ದಾರೆ. ಅಲ್ಲದೆ ಸ್ನೇಹಿತನೊಂದಿಗೆ ಸೇರಿಕೊಂಡು ಕತೆ ಬರೆಯುವಲ್ಲಿಯೂ ಶ್ರಮ ಹಾಕಿದ್ಧಾರೆ. ಗುರುಕಿರಣ್ ಸಂಗೀತ ನೀಡುತ್ತಿದ್ದು, ಹೈದರಾಬಾದ್‌ನ ಶೋಯಬ್ ಅಹಮದ್ ಛಾಯಾಗ್ರಹಣ, ಶ್ರೀಧರ್ ವೈ ಎಸ್ ಸಂಕಲನ, ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಡಾ|| ವಿನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನ್ಯೂರಾನ್ಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.