ಚಿತ್ರ: ಸರಿಪೋದ ಸನಿವಾರಂ
ನಿರ್ದೇಶನ: ವಿವೇಕ್ ಆತ್ರೇಯ
ತಾರಾಗಣ: ನಾನಿ, ಪ್ರಿಯಾಂಕ ಮೋಹನ್, ಸಾಯಿ ಕುಮಾರ್, ಎ ಜೆ ಸೂರ್ಯ , ಸತ್ಯ ಪ್ರಕಾಶ್ ಮತ್ತಿತರರು
ರೇಟಿಂಗ್ : *
ಆಕ್ಷನ್, ಸಸ್ಪೆನ್ಸ್ ಜೊತೆಗೆ ವಿಭಿನ್ನ ಪ್ರೇಮಕಥೆಯ ತಿರುಳು ಹೊಂದಿರುವ ಚಿತ್ರ ತೆಲುಗಿನ " ಸರಿಪೋದ ಸನಿವಾರಂ" ತೆರೆಗೆ ಬಂದಿದೆ.
ನಿರ್ದೇಶಕ ವಿವೇಕ್ ಆತ್ರೇಯ ಮುದ್ದಾದ ಕಥಾ ಹಂದರವನ್ನು ಮುಂದಿಟ್ಟುಕೊಂಡು ಸೀಟಿನ ತುದಿಯಲ್ಲಿ ಪ್ರೇಕ್ಷಕರನ್ನು ನಿಲ್ಲಿಸಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಇಡೀ ಚಿತ್ರವನ್ನು ಅವರಿಸಿ ಬಿಟ್ಟಿದ್ದಾರೆ ಜೊತೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಪಾತ್ರ ಮಾಡಿರುವ ದಯಾನಂದ್ ಅವರೊಂದಿಗಿನ ಜುಗಲ್ ಬಂಧಿ ಚಿತ್ರದ ಹೈಲೈಟ್.
ಶನಿವಾರ ಎಂದರೆ ಸೂರ್ಯನಿಗೆ ಹಬ್ಬ. ವಾರದ ಉಳಿದೆಲ್ಲಾ ದಿನ ಬಿಟ್ಟು ಅದೇ ದಿನ ಆತನಿಗೆ ಅಚ್ಚು ಮೆಚ್ಚು ಯಾಕೆ. ಅತ ಯಾಕೆ ಆಯ್ಕೆ ಮಾಡಿಕೊಂಡ ಅದರ ಹಿಂದಿನ ರಹಸ್ಯವಾದರೂ ಏನು ಎನ್ನುವುದು ಚಿತ್ರದ ಕಥನ ಕುತೂಹಲ.
ಅಮ್ಮನ ಮುದ್ದಿನ ಮಗ ಚಿನ್ನು ಸೂರ್ಯ- ನಾನಿಗೆ ಬಾಲ್ಯದಿಂದಲೇ ಅತಿಯಾದ ಕೋಪ, ಅದರಲ್ಲಿಯೂ ಅಮ್ಮ ಅಥವಾ ಕುಟುಂಬದ ಸದಸ್ಯರು ಅಥವಾ ಅಮಾಯಕರ ಮೇಲೆ ದೌರ್ಜನ್ಯ ಅನ್ಯಾಯ ಮಾಡಿದರೆ ಆತ ಮನುಷ್ಯ ಅಲ್ಲ ಎನ್ನುವುದನ್ನು ಸಾಬೀತು ಪಡಿಸುವ ಚಿತ್ರ. ಇದೇ ಕಾರಣಕ್ಕೆ ತಾಯಿ ಮಗನಿಂದ ಭಾಷೆ ತೆಗೆದುಕೊಂಡು ಆತನ ಕೋಪ ಕಡಿಮೆ ಮಾಡಲು ಮುಂದಾಗುತ್ತಾರೆ.
ಈ ನಡುವೆ ತಾಯಿಯ ಅಕಾಲಿಕ ನಿಧನನಿಂದ ಕಂಗಾಲಾಗುವ ಸೂರ್ಯ, ನೆರೆ ಹೊರೆ ಅಥವಾ ಅಮಾಯಕರನ್ನು ಹಿಂಸೆ ಮಾಡಿದರೆ ಸಹಿಸಿಕೊಳ್ಳದವ. ಹೊಸದಾಗಿ ಪೇದೆಯಾಗಿ ಕೆಲಕ್ಕೆ ಸೇರಿಕೊಳ್ಳುವ. ಚಾರುಲತಾ - ಪ್ರಿಯಾಂಕಾ ಮೋಹನ್ ಕೂಡ ಸಾಮಾಜಿಕ ಕಳಕಳಿ ಹೊಂದಿದಾಕೆ.ಅಕೆ ಕೆಲಸ ಮಾಡುವ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದಯಾನಂದ್ ಸೈಕೋ. ಈತನ ಆಟ, ಉಪಟಳ ಅಣ್ಣನ ವಿರುದ್ಧವೇ ಸೇಡು ತೀರಿಸಿಕೊಳ್ಳಲು ನಡೆಸುವ ಹುನ್ನಾರ .
ಅಮಾಯಕರ ವಿರುದ್ದ ಅಟ್ಟಹಾಸ ಮೆರೆಯುವ ಇನ್ಸ್ ಪೆಕ್ಟರ್ ವಿರುದ್ದ ಸೂರ್ಯನ ಮೂಲಕ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡ್ತಾಳೆ ಬಾಲ್ಯದಲ್ಲಿ ಊರು ಬಿಟ್ಟು ಹೋಗಿದ್ದ ಅತ್ತೆ ಮತ್ತು ಅವರ ಮಗಳು ಕಲ್ಲು- ಕಲ್ಯಾಣಿಗೆ ಸೂರ್ಯ ಹುಡುಕಾಟ ನಡೆಸುತ್ತಾನೆ. ಇತ್ತ ಚಾರುಲತಾ ಅತ್ತೆಯ ಮಗಳೇ ಎನ್ನುವ ಸತ್ಯ ತಿಳಿಯುತ್ತೆ.ಈ ನಡುವೆ ನಾನಿ , ದಯಾನಂದ್ ನಡುವೆ ವೈಶಮ್ಯ ಯಾಕೆ.. ಅಮ್ಮನಿಗೆ ಕೊಟ್ಟ ಮಾತು ಏನಿ ಎನ್ನುವುದು ಚಿತ್ರದ ಕುತೂಹಲ ನ್ಯಾಚುರಲ್ ಸ್ಟಾರ್ ನಾನಿ, ಇಡೀ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಪ್ರಿಯಾಂಕ ಮೋಹನ್ , ಸಾಯಿ ಕುಮಾರ್ ಸೇರಿದಂತೆ ಮತ್ತಿತರು ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ.