ವೆಂಕಟ್ ಭಾರದ್ವಾಜ್ ರವರ``ಹೇ ಪ್ರಭು``ಚಿತ್ರ ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ
Posted date: 27 Thu, Jun 2024 05:36:18 PM
ವಿನೂತನ ಶೇರ್ಷಿಕೆ ಮತ್ತು ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ರವರ ೧೩ ನೇ ಹೊಸ ಚಿತ್ರ "ಹೇ ಪ್ರಭು" ಸದ್ದಿಲ್ಲದೆ ಮೊದಲ  ಹಂತದ  ಶೂಟಿಂಗ್ ಮುಗಿಸಿದೆ. 

"ಹೇ ಪ್ರಭು ", ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದ ಅಧವಾ "ಪ್ರಭು" ಅಂದರೇ  ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ . ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ  ವಿನ್ಯಾಸ (ಟೈಟಲ್ ಲೋಗೋ) ಅನಾವರಣ ಗೊಳಿಸಿದೆ, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಸ್ವಲ್ಪ ಕುತೂಹಲ .. ! "ಹೇ ಪ್ರಭು",

ಇನ್ನು ೫ ದಿನಗಳ ಶೂಟಿಂಗ್ ಮುಗಿದರೆ ಚಿತ್ರಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ , ಜೊತೆಜೊತೆಯಾಗಿ ಸಂಕಲನ ಕಾರ್ಯಕೂಡ ಪ್ರಗತಿಯಲ್ಲಿದ್ದು ನಿರ್ದೇಶಕರು ಮೊದಲ ಪ್ರತಿಯನ್ನು 
ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ . 

ಪ್ರಮೋದ್  ಭಾರತೀಯ ಛಾಯಾಗ್ರಹಣ ,  ಡ್ಯಾನ್ನಿ ಆಂಡರ್ಸನ್ , ಸಂಗೀತ , ಚಂದನ್ p , ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ . 
ಮಹೇಶ್ ಮತ್ತು ಪ್ರವೀಣ್ ರವರ ಸಂಭಾಷಣೆ , ಅರಸು ಅಂತಾರೆ ಮತ್ತ್ತು ಮನೋಜ್ ರಾವ್ ರವರ  
ಸಾಹಿತ್ಯ ಚಿತ್ರಕ್ಕಿದೆ 
24 Reels ಮತ್ತು Amrutha Film Center ನಿರ್ಮಾಣ , 
ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್ . 

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ರವರ ಪುತ್ರ ಡ್ಯಾನ್ನಿ ಆಂಡರ್ಸನ್ ರವರನ್ನು ಚಿತ್ರ ರಂಗಕ್ಕೆ  ಸಂಗೀತ ನಿರ್ದೇಶಕರಾಗಿ   ಚಿತ್ರರಂಗಕ್ಕೆ ವೆಂಕಟ್ ಭಾರಾದ್ವಾಜ್ ಪರಿಚಯಿಸುತ್ತಿದ್ದಾರೆ . 

ತಾರಾಬಳಗದಲ್ಲಿ ಜಯ್ , ಸೂರ್ಯ ರಾಜ್ , ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ , ಗಜಾನನ ಹೆಗಡೆ , ನಿರಂಜನ್ ಪ್ರಸಾದ್ ,  ಹರಿ ಧನಂಜಯ , ಪ್ರಮೋದ್ ರಾಜ್ , ದಿಲೀಪ್ ದೇವ್ , ನೇತ್ರ ಗೋಪಾಲ್,  ಸುಚಿತ್ರ ದಿನೇಶ್,  ಸಾಧನ ಭಟ್ , ಮನೋಹರ್ , ಶಶಿರ್  ರಾಜು , ಹಾಗು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ . 

ಶೀಘ್ರದಲ್ಲಿ ತಂಡ "ಹೇ ಪ್ರಭು " ಮೊದಲ ನೋಟ (first look ) ಬಿಡುಗಡೆ ಮಾಡಲಿದೆ 

ಸದ್ಯಕ್ಕೆ ವೆಂಕಟ್ ಭಾರದ್ವಾಜ್  ರವರ ಹೈನ  ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed