ಸಿನಿಮಾ ಕಾರ್ಮಿಕರ ಬೆನ್ನಿಗೆ ನಿಂತ ಯುವರಾಜ ನಿಖಿಲ್ ಕುಮಾರ್
Posted date: 28 Sat, Mar 2020 03:40:15 PM
ಮಹಾಮಾರಿ ಕೊರೊನಾ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿರುವುದರಿಂದ, ಎಲ್ಲಾ ಉದ್ಯಮಗಳು ಸ್ಥಗಿತವಾಗಿ, ಜನರು ಕೆಲಸ ಇಲ್ಲದೇ ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ. ಅದೇ ರೀತಿ ಸಿನಿಮಾ ಉದ್ಯಮ ಕೂಡ ಸಂಪೂರ್ಣ ಬಂದ್ ಆಗಿರುವ ಕಾರಣ ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗ ಕಂಗಾಲಾಗಿದೆ. 

ಅಂತಹ ಕಾರ್ಮಿಕರಿಗೆ ಸಹಾಯಹಸ್ತ ನೀಡಲು 'ಯುವರಾಜ ನಿಖಿಲ್ ಕುಮಾರ್' ಅವರು ಮುಂದೆ ಬಂದಿದ್ದು, ಸಿನಿಮಾ ಕಾರ್ಮಿಕರಾದ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಹಾಗೂ ಇತ್ಯಾದಿ ಸುಮಾರು 3ಸಾವಿರ ಸಿನಿಮಾ ಕಾರ್ಮಿಕರ ಅಕೌಂಟ್'ಗೆ ನೇರವಾಗಿ ಧನ ಸಹಾಯ ಮಾಡಿಲು ತೀರ್ಮಾನಿಸಿದ್ದಾರೆ. ಈ ನಿರ್ಧಾರ ತಿಳಿದ ಸಿನಿ ಕಾರ್ಮಿಕರು ನಿಖಿಲ್ ಕುಮಾರ್ ಅವರನ್ನ ಶ್ಲಾಘಿಸಿ ಧನ್ಯವಾದ ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಿನಿಮಾ ಕಾರ್ಮಿಕರ ಬೆನ್ನಿಗೆ ನಿಂತ ಯುವರಾಜ ನಿಖಿಲ್ ಕುಮಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.