ಹಾಸ್ಯ ಲೇಪಿತ, ರೋಚಕ ಭರಿತ ಗೋವಿಂದ ಗೋವಿಂದ
Posted date: 01 Tue, Sep 2020 06:34:27 PM

ಶ್ರೀ ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ. ಕ್ರಿಯೇಶನ್ಸ್ ಮತ್ತುರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಗೋವಿಂದಗೋವಿಂದಚಿತ್ರವುತೆರೆಗೆ ಬರಲು ಸಿದ್ಧವಾಗಿದೆ.

ಮೊನ್ನೆಯಷ್ಟೆ ಸೆನ್ಸಾರ್ ನವರು ಸಿನಿಮಾ ನೋಡಿ, ಯಾವುದೇಕಟ್‌ಅಥವಾ ಬೀಪ್‌ಇಲ್ಲದೆ ಸಿನಿಮಾಗೆಯು ಪ್ರಮಾಣ ಪತ್ರ ನೀಡಿದ್ದು, ಸೆನ್ಸಾರ್ ಮಂಡಳಿಯ ಸದಸ್ಯರು ಸಹ ಸಿನಿಮಾವನ್ನುಒಂದು ಸದಭಿರುಚಿಯಕೌಟುಂಬಿಕ ಹಾಸ್ಯ ಭರಿತರೋಚಕಚಿತ್ರಎಂದು ಶ್ಲಾಘಿಸಿದ್ದಾರೆ. ಸೆನ್ಸಾರ್‌ಆಫೀಸರ್‌ಕೂಡ ಬಹಳ ದಿನಗಳ ಬಳಿಕ ಒಂದುಚಿತ್ರ ನೋಡೆದೆಎಂದುತಂಡದವರನ್ನುಹೊಗಳಿದ್ದಾರೆ.

ಹಾಸ್ಯಚಿತ್ರ ಮಾಡುವುದು ಬಹಳ ಕಷ್ಟ, ಅದರಲ್ಲೂಕ್ಲೀನ್ಕಾಮಿಡಿ ಮಾಡೋದುಇನ್ನೂ ಕಷ್ಟ, ಸೆನ್ಸಾರ್ ನವರು ನಮ್ಮಚಿತ್ರಕ್ಕೆಯಾವುದೇ ಬದಲಾವಣೆಇಲ್ಲದೇಯು ಸರ್ಟಿಫಿಕೇಟ್ ನೀಡಿರುವುದು ನಮ್ಮ ಈ ಪ್ರಯತ್ನಕ್ಕೆದೊರೆತಂತ ಮೊದಲ ಜಯ. ಈ ಚಿತ್ರವನ್ನುಕುಟುಂಬದವರೆಲ್ಲಾಯಾವುದೇ ಮುಜುಗರವಿಲ್ಲದೆ ನೋಡಿ ಆನಂದಿಸಬಹುದು. ಮಕ್ಕಳು, ಹಿರಿಯರು, ಕಿರಿಯರು, ಮಹಿಳೆಯರು, ಯುವಕರುಒಟ್ಟಾಗಿ ನೋಡಿ ಆನಂದಿಸುವ ಚಿತ್ರ ನಮ್ಮದುಎನ್ನುತ್ತಾರೆ ನಿರ್ಮಾಪಕರಲ್ಲಿಒಬ್ಬರಾದರವಿ.ಆರ್.ಗರಣಿ.

ಸೆನ್ಸಾರ್ ನವರು ಹಾಡಿ ಹೊಗಳಿದ ಚಿತ್ರವನ್ನು ನಿರ್ಮಾಪಕರು ಹಾಗು ಅವರಕುಟುಂಬದವರುಕೂಡಲೆ ನೋಡಬೇಕುಎಂದು ಆಸೆ ಪಟ್ಟಿದ್ದರಿಂದಟೆಕ್ನಿಕಲ್ ಪ್ರಿವಿವ್ಯೂಕೂಡ ನಡೆಯಿತು. ನನ್ನ ಮಗ ಹೀರೊಅಂತಅಲ್ಲಾ, ಗೋವಿಂದಗೋವಿಂದ ನಿಜವಾಗಲೂಒಂದು ಒಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರುದಶಕಕ್ಕು ಹೆಚ್ಚಿನಿಂದ ಇದ್ದಿನೀ, ಮೊದಲ ಬಾರಿಗೆಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆರಿಲೀಸ್ ಮಾಡಬೇಕುಎಂದು ನಿರ್ಧರಿಸಿದ್ದೇವೆ. ತಮಿಳು ಹಾಗು ಮಲಯಾಳಂ ನಲ್ಲಿಡಬ್ ಮಾಡಿರಿಲೀಸ್ ಮಾಡೋದುಖಂಡಿತ, ಇನ್ನು ಬೇರೆ ಭಾಷೆಗಳಲ್ಲಿ ಮಾಡಬೇಕೆ ಬೇಡವೆಅನ್ನೋದನ್ನಯೋಚಿಸುತಿದ್ದೇವೆ.ಎಂದು ನಿರ್ಮಾಪಕರಲ್ಲಿಓರ್ವರಾದ ಹಿರಿಯ ನಿರ್ಮಾಪಕಎಸ್. ಶೈಲೇಂದ್ರ ಬಾಬು ಹೇಳಿದರು.

ಟಿವಿಚಾನಲ್ ನವರು ಸಿನಿಮಾ ನೋಡಿ, ಒಂದು ಭಾರಿ ಮೊತ್ತಕ್ಕೆಗೋವಿಂದಗೋವಿಂದಚಿತ್ರದ ಸ್ಯಾಟಿಲೈಟ್‌ರೈಟ್ಸ್‌ಅನ್ನು ಈಗಾಗಲೆ ಕೊಂಡುಕೊಂಡಿದ್ದಾರೆ. ಓಟಿಟಿಗಳಿಂದ ಬೇಡಿಕೆ ಬಂದಿದ್ದರೂ, ಮೊದಲುಚಿತ್ರವನ್ನುದೊಡ್ಡ ಪರದೆ ಮೇಲೆ ರಿಲೀಸ್ ಮಾಡಿ ನಂತರಓಟಿಟಿಗೆಕೊಡುತ್ತೇವೆಎನ್ನುತ್ತಾರೆತಂಡದ ಸದಸ್ಯರು.
ಇದು ನನ್ನ ಮೊದಲ ಚಿತ್ರ. ನನ್ನ ಬ್ಯಾನರ್ ಹೆಸರು ಹಾಗೂ ನಿರ್ಮಾಪಕರ ಹೆಸರಲ್ಲಿ ದಿಗ್ಗಜರಜೊತೆ ನನ್ನ ಹೆಸರು ನೋಡಿ ನನಗೆ ಬಹಳ ಸಂತೋಷಆಯಿತು. ಒಂದು ಒಳ್ಳೆಯ ಸಿನಿಮಾದಿಂದ ನನ್ನ ಸಿನಿ ಪಯಣ ಪ್ರಾರಂಭವಾಯಿತುಎಂದರು ನಿರ್ಮಾಪಕಕಿಶೋರ್. ಇವರು ಮಧುಗಿರಿಯ ಶಾಂತಲಾಚಿತ್ರಮಂದಿರದ ಮಾಲೀಕರು ಹೌದು.

ಗೋವಿಂದಗೋವಿಂದಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನ, ಕವಿತಾಗೌಡ, ರೂಪೇಶ್ ಶೆಟ್ಟಿ, ಅಚ್ಯುತ್‌ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್‌ಚೆಂಡೂರ್ ಹಾಗೂ ಇನ್ನಿತರ ನುರಿತಕಲಾವಿದರದಂಡೇಇದೆ. ನಿರ್ದೇಶಕತಿಲಕ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಕೆ.ಎಸ್. ಚಂದ್ರಶೇಖರ್‌ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್‌ರಂಗಭೂಮಿ ಸಂಭಾಷಣೆ, ಡಾ. ತ್ರಿಲ್ಲರ್ ಮಂಜು ಸಾಹಸ ಹಾಗೂ ಜನಾರ್ಧನ್‌ರಾಮ್‌ರವರುಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಎರಡು ವರ್ಷಗಳ ನಂತರ ನಾನು ಕನ್ನಡ ಸಿನಿಮಾ ಮಾಡ್ತಾ ಇದ್ದೀನಿ. ಬ್ಯುಸಿನೆಸ್‌ನ ವ್ವಹಾರದಕಡೆ ಗಮನ ಕೊಡಲುಚಿತ್ರರಂಗದಿಂದಅಲ್ಪ ವಿರಾಮ ತೆಗೆದುಕೊಂಡಿದ್ದೇ.ಇದರಕಥೆ ಹಾಗೂತಂಡ ನನಗೆ ಇಷ್ಟ ಆಯಿತು ಹಾಗಾಗಿ ಒಪ್ಪಿಕೊಂಡೆ. ರವಿ ಗರಣಿಅವರು ನನಗೆ ಬಹಳ ವರ್ಷಗಳಿಂದ ಪರಿಚಯ. ಅವರೇ ಈ ಸಿನಿಮಾದ ಬೆನ್ನೆಲಬು ಹಾಗಾಗಿ ತಂಡದ ಸದಸ್ಯರು ನನಗೆ ಹೊಸಬರಾದರೂಅವರ ನೇತೃತ್ವದ ಬಗ್ಗೆ ನನಗೆ ನಂಬಿಕೆ ಇದ್ದಿದ್ದರಿಂದಚಿತ್ರ ಮಾಡಲು ಹೆಚ್ಚು ಯೋಚಿಸದೆಒಪ್ಪಿಕೊಂಡೆ. ಚಿತ್ರ ನೋಡಿದಮೇಲೆ ಬಹಳ ಖುಷಿ ಆಗುತ್ತಿದೆಎಂದರು ನಾಯಕ ನಟ ಸುಮಂತ್ ಶೈಲೇಂದ್ರ.

ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಹಾಗೂ ಇನ್ನಿತರರಮಣೀಯ ಪ್ರದೇಶಗಳಲ್ಲಿ ೬೦ಕ್ಕು ಹೆಚ್ಚು ದಿನ ಚಿತ್ರೀಕರಣ ನಡೆಸಿದ್ದಾರೆ ಚಿತ್ರತಂಡ. ಚಿತ್ರೀಕರಣಕ್ಕೆಅದ್ಧೂರಿಯಾಗಿಖರ್ಚು ಮಾಡಿದ್ದು ಪಚಾರ ಕಾರ್ಯಗಳನ್ನು ಕೂಡಅದ್ಧೂರಿಯಾಗಿ ಮಾಡಬೇಕೆಂದುತಂಡ ನಿರ್ಧರಿಸಿದೆ.
ಇಂತಹ ಒಳ್ಳೆಯ ಸಿನಿಮಾ ಮಾಡಿಚೆನ್ನಾಗಿ ಪ್ರಚಾರ ಮಾಡದಿದ್ದರೆಅದುತಪ್ಪಾಗುತ್ತೆ. ಹಾಗಾಗಿ ಈ ಭಾರೀ ಮೊತ್ತವನ್ನು ಪ್ರಚಾರ ಕಾರ್ಯಗಳಿಗೆ ನಿಗದಿ ಮಾಡಿದ್ದೇವೆಎನ್ನುತ್ತಾರೆರವಿ.ಆರ್.ಗರಣಿ. ತಮ್ಮದೆ ಸ್ವಂತ ಬ್ಯಾನರ್ ನಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವುದಾಗಿಚಿತ್ರತಂಡ ತಿಳಿಸಿದೆ. ಹಿತನ್ ಸಂಯೋಜನೆಯಒಟ್ಟು ೬ ಹಾಡುಗಳು ಹಾಗೂ ರ‍್ಯಾಪರ್‌ಆಲ್ ಓಕೆ ಅಲೋಕ್ ಬಾಬು ಸಂಯೋಜನೆಒಂದು ಹಾಡು ಹೀಗೆ ೭ ಹಾಡುಗಳು ಚಿತ್ರದಲ್ಲಿವೆ, ಎಲ್ಲಾ ಹಾಡುಗಳು ಸೂಪರ್ ಹಿಟ್‌ಆಗುತ್ತೆಅನ್ನೋ ನಂಬಿಕೆ ಇರೋದರಿಂದಲೆಇದನ್ನ ಬೇರೆಯವರಿಗೆಕೊಡದೆ ನಮ್ಮದೆ ಹೊಸ ಯೂಟ್ಯೂಬ್‌ಚಾನಲ್ ನಲ್ಲಿ ಬಿಡುಗಡೆ ಮಾಡಬೇಕುಅಂತ ನಿರ್ಧರಿಸಿದ್ದೇವೆಎಂದರು ಶೈಲೇಂದ್ರ ಬಾಬು.

ಅತಿ ಶೀರ್ಘದಲ್ಲೆ ಟೀಸರ್‌ಟೈಲರ್‌ಅನ್ನು ಹೆಸರಾಂತ ಸ್ಟಾರ್‌ಕಲಾವಿದರಿಂದ ಬಿಡುಗಡೆ ಮಾಡುವುದಕ್ಕೆಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಹಾಗೂತದನಂತರ ವಾರಕ್ಕೊಂದು ಹಾಡನ್ನುಕೂಡರಿಲೀಸ್ ಮಾಡುತ್ತೇವೆಎಂದರುಕಿಶೋರ್.

ಇನ್ನೋರ್ವ ನಾಯಕ ನಟರೂಪೇಶ್ಹೋದ ವರ್ಷ ನನ್ನ ತುಳು ಸಿನಿಮಾಗಿರಗಿಟ್ ಸೂಪರ್ ಹಿಟ್‌ಆಯಿತು. ಈ ವರ್ಷಗೋವಿಂದಗೋವಿಂದ ಸೂಪರ್ ಹಿಟ್‌ಆಗುತ್ತೆಅನ್ನೋ ನಂಬಿಕೆ ಚಿತ್ರ ನೋಡಿದ ಮೇಲೆ ಬಲವಾಗಿ ಬಂದಿದೆಎಂದರು.

ನಾಯಕಿಯರಾದ ಭಾವನಾ ಹಾಗೂ ಕವಿತಾಚಿತ್ರ ಹಾಗೂ ತಮ್ಮ ಪಾತ್ರಚೆನ್ನಾಗಿ ಮೂಡಿಬಂದಿದೆಎಂದರು.

ಇದು ನನ್ನ ಮೊದಲ ಚಿತ್ರ. ಸೆನ್ಸಾರ್ ನವರೆ ಮೊದಲ ಪ್ರೇಕ್ಷಕರು. ಅವರುಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದಾಗ ಬಹಳ ಸಂತೋಷವಾಯಿತು. ನಂತರ ನನ್ನತಂಡ ಹಾಗೂ ನಿರ್ಮಾಪಕರುಚಿತ್ರ ನೋಡಿ ಹೊಗಳಿದಾಗ ಈ ಚಿತ್ರದಿಂದ ನನಗೆ ಒಳ್ಳೆಯ ಭವಿಷ್ಯ ಸಿಗುತ್ತೆ ಎಂಬ ನಂಬಿಕೆ ಬಂದಿದೆ. ಈ ಚಿತ್ರದ ನಿರ್ದೇಶಕ ನಾನಾಗಲು ಕೇವಲ ರವಿ ಗರಣಿಯವರೇಕಾರಣ. ಅವರಿಗೆ ನಾನು ಚಿರರುಣಿಆಗಿರುತ್ತೇನೆಎಂದರು ನಿರ್ದೇಶಕತಿಲಕ್.

ಕ್ಲೀನ್‌ಕಾಮಿಡಿಯಜೊತೆ ಮುದ ನೀಡುವ ಸಂಗೀತ, ರಮಣೀಯ ತಾಣಗಳನ್ನು ತೋರಿಸುತ್ತಾ ಮಧ್ಯಾಂತರದಲ್ಲಿರೋಚಕತಿರುವನ್ನು ಪಡೆದು, ಒಂದು ಹೊಸ ಅನುಭವನ್ನು ನೀಡುವಚಿತ್ರಇದಾಗಿದೆಎಂದರುಜನಾರ್ಧನ್‌ರಾಮ್.

ಆದಷ್ಟು ಬೇಗ ಚಿತ್ರಮಂದಿರಗಳು ತೆರೆದುಗೋವಿಂದಗೋವಿಂದಚಿತ್ರತೆರೆಕಾಣಲಿ. ಕಷ್ಟದ ಈ ಸಮಯದಲ್ಲಿ ಮನೆ ಮಂದಿಯೆಲ್ಲಾಒಟ್ಟಾಗಿಕೂತು ನಕ್ಕು ನಲಿದು ಆನಂದಿಸಲಿ ಎಂಬುದೆ ನಮ್ಮ ಆಸೆ ಎಂದರುಚಿತ್ರತಂಡ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾಸ್ಯ ಲೇಪಿತ, ರೋಚಕ ಭರಿತ ಗೋವಿಂದ ಗೋವಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.