ಈ ಶುಕ್ರವಾರ ಎಮೋಷನಲ್ ಡ್ರಾಮಾ ವೀರಂ ತೆರೆಗೆ
Posted date: 03 Mon, Apr 2023 09:06:01 AM
ನಟ, ನಿರ್ಮಾಪಕ ಕೆ.ಎಂ.ಶಶಿಧರ್ ಅವರ ಶಶಿಧರ್ ಪ್ರೊಡಕ್ಷನ್ ಸಂಸ್ಥೆಯ ಮೂರನೇ ಚಿತ್ರ ವೀರಂ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎಮೋಷನಲ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಚಿತ್ರಗಳ ನಂತರ ಶಶಿಧರ್ ಅವರು ಭರ್ಜರಿ ಆಕ್ಷನ್ ಥ್ರಿಲ್ಲರ್  ಜಾನರ್ ಚಿತ್ರವನ್ನು ಕನ್ನಡ ಜನತೆಗೆ ನೀಡುತ್ತಿದ್ದಾರೆ. ವೀರಂ ಚಿತ್ರದಲ್ಲಿ  ಪ್ರಜ್ವಲ್ ದೇವರಾಜ್ ಜೊತೆ  ರಚಿತಾರಾಮ್ ನಾಯಕಿಯಾಗಿ ನಟಿಸಿದ್ದಾರೆ.  

ಶಶಿಧರ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದ ಜೊತೆಗೆ ಸುಮಾರು ೧೫ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ ಸದ್ಯ ಶಶಿಧರ್ ಅವರ ನಿರ್ಮಾಣದ ಬಿಗ್‌ಪ್ರಾಜೆಕ್ಟ್  ವೀರಂ ಏಪ್ರಿಲ್ ೭ರಂದು  ಬಿಡುಗಡೆಯಾಗಲು ಸಿದ್ಧವಾಗಿದೆ. 

ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಖದರ್‌ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಹಿರಿಯನಟಿ ಶೃತಿ ಅವರು ಅಕ್ಕ ತಮ್ಮನಾಗಿ ಕಾಣಿಸಿಕೊಂಡಿದ್ದು, ಡಿಂಪಲ್‌ಕ್ವೀನ್ ರಚಿತಾರಾಮ್ ನಾಯಕಿಯಾಗಿ ಬಣ್ಣಹಚ್ಚಿದ್ದು,  ಇದೇ ಮೊದಲಬಾರಿಗೆ  ರಚಿತಾರಾಮ್, ಪ್ರಜ್ವಲ್ ಜೊತೆ ಸ್ಕಿöçÃನ್‌ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಒಬ್ಬ ಕಾಲೇಜು ಯುವತಿಯ ಪಾತ್ರದಲ್ಲಿ ನಟಿಸಿದ್ದು, ಪ್ರಜ್ವಲ್ ದೇವರಾಜ್ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ.

ಚಿತ್ರದ ಕುರಿತಂತೆ  ಮಾತನಾಡಿದ ನಿರ್ಮಾಪಕ ಶಶಿಧರ್, ನಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನಲ್ಲೇ ಇದೊಂದು ಹೈಬಜೆಟ್ ಸಿನಿಮಾ. ಎಮೋಷನಲ್ ಥ್ರಿಲ್ಲರ್ ಡ್ರಾಮಾ ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಚಿತ್ರ.  ಶ್ರೀನಗರ ಕಿಟ್ಟಿ ಅವರು ವಿಲನ್‌ಶೇಡ್ ಇರುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಶಿಶ್ಯ ದೀಪಕ್ ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ಇಡೀ ಚಿತ್ರದಲ್ಲಿ ರಗಡ್ ಆಗಿ ಹೊರಹೊಮ್ಮಿದ್ದಾರೆ. ಬಲ ರಾಜವಾಡಿ ಒಬ್ಬ ರಾಜಕಾರಣಿಯಾಗಿ ಅಲ್ಲದೆ ಹಿರಿಯನಟ  ಅಚ್ಯುತ್‌ಕುಮಾರ್  ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ಉಳಿದಂತೆ ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ದೊಡ್ಡ ಕಲಾವಿದರ ತಂಡವೇ ಈ ಚಿತ್ರದಲ್ಲಿದೆ. ಮಾಸ್ ಜೊತೆಗೆ ಎಮೋಷನಲ್ ಕಥೆ ಹೊಂದಿದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನು ವಿಶೇಷವಾಗಿ ತೋರಿಸಲಾಗಿದೆ, ವಿಷ್ಣು ಅಭಿಮಾನಿಗಳಿಗೆ ಈಚಿತ್ರ ಖಂಡಿತ  ಇಷ್ಟವಾಗುತ್ತದೆ. ಅನೂಪ ಸಿಳೀನ್ ಅವರ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳು ಈ ಚಿತ್ರದಲ್ಲಿವೆ. ರಾಮಾ ರಾಮಾರೇ, ಒಂದಲ್ಲ ಎರಡಲ್ಲ ಖ್ಯಾತಿಯ  ಲವಿತ್ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಡಿಫರೆಂಟ್ ಡ್ಯಾನಿ, ಅರ್ಜುನ್ ರಾಮು ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಒಂದು ಎಕರೆ ವಿಸ್ತೀರ್ಣದ ಗೋಡೌನ್‌ನಲ್ಲಿ ೩೦೦ ಲೈಟ್‌ಗಳನ್ನು ಬಳಸಿ ವಿಶೇಷವಾಗಿ ಈ ಫೈಟ್ ಸೀನ್ ಮಾಡಲಾಗಿದೆ. ಈ ಆ್ಯಕ್ಷನ್ ಸೀನ್‌ನಲ್ಲಿ ನಟ ಹೆಸರಾಂತ ನಟ ಚಿರಾಗ್‌ಜಾನಿ ವಿಲನ್ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed