ಮೇ 17ಕ್ಕೆ `ಕುಂಭ ರಾಶಿ`
Posted date: 29 Mon, Apr 2013 08:51:40 AM

ಇನ್ನೊಂದು ಕುತೂಹಲ ಹುಟ್ಟಿಸಿರುವ ಚಿತ್ರ ‘ಕುಂಭ ರಾಶಿ’ ಸಾಹಸ, ಹೃದಯಂಗಮ ಸಂದರ್ಭಗಳು, ಪ್ರೀತಿಯ ನಿವೇದನೆ, ಪ್ರಕೃತಿ ಸೌಂದರ್ಯದ ಮಜಲು, ಮೆಲುಕು ಹಾಕುವಂತಹ ಸಾಹಿತ್ಯ, ಸಂಗೀತ ಹೊಂದಿರುವ ಜೊತೆಗೆ ನವ ಯುವಕ ಚೇತನ್ ಚಂದ್ರ ಅವರ 8 ಪ್ಯಾಕ್ ಜುಮ್ಮೆನಿಸುವ ಸಂಧರ್ಭ ಹೊತ್ತುಕೊಂಡಿರುವ ಕನ್ನಡ ಸಿನೆಮಾ ಈ ತಿಂಗಳ 17ರಂದು ಬಿಡುಗಡೆ ಆಗ್ಲಿದೆ ಎಂದು ನಿರ್ದೇಶಕರಾದ ಚಂದ್ರಹಾಸ ತಿಳಿಸುತ್ತಾರೆ. 

‘ಕುಂಭ ರಾಶಿ’ಗೆ ಅಡಿ ಬರಹದಲ್ಲಿ ಕುಲ ಇಲ್ಲ ಗೋತ್ರ ಇಲ್ಲ ಎನ್ನುವ ಚಿತ್ರ ಶ್ರೀ ರೇವಣ್ಣ ಸಿದ್ದೆಶ್ವರ ಕ್ರಿಯೇಷನ್ಸ್ ಅರ್ಪಿಸುವ, ಸಿದ್ದು ಪಾಟಿಲ್ ಮೋಘ ಹಾಗೂ ನಾಗಮ್ಮ ಪಾಟಿಲ್ ಅವರ ಮೊದಲ ನಿರ್ಮಾಣದ ಚಿತ್ರ, ಕೌರವ ವೆಂಕಟೇಶ್ ಅವರ ಸಾಹಸ, ಜೈ ಆನಂದ್ ಅವರ ಛಾಯಾಗ್ರಹಣ, ಎಸ್ ಕೆ ಸಾಲಿ ಅವರ ಸಂಭಾಷಣೆ ಇರುವ ಚಿತ್ರದಲ್ಲಿ ರವಿ ತೇಜ ಅವರು ಪ್ರಮುಖ ಪಾತ್ರದಲ್ಲಿ ಇದ್ದಾರೆ. ಶರತ್ ಲೋಹಿತಾಶ್ವ, ಗುರುರಾಜ್ ಹೊಸ್ಕೋಟೆ, ಹರೀಶ್ ರಾಯ್, ಮೋಹನ್ ಜುನೇಜ, ಬಿರಾದಾರ  ಹಾಗೂ ಇತರರು ಪೋಷಕ ಪಾತ್ರದಲ್ಲಿ ಇದ್ದಾರೆ.
ಪುರೋಹಿತರಾಗಿ, ಸಂಗೀತದ ಶಿಕ್ಷಕರಾಗಿರುವ ಶ್ರೀವತ್ಸ ಅವರು ಕನ್ನಡ ಸಿನೆಮಕ್ಕೆ ‘ಕುಂಭ ರಾಶಿ’ ಮೂಲಕ ಆಗಮಿಸಿದ್ದಾರೆ. ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಮೂರು ಹಾಡುಗಳು, ಅರಸು ಅಂತಾರೆ, ಹರೀಶ್ ಶೃಂಗ,ವಿಜ್ಞೇಶ್ವರ ವಿಶ್ವ ಅವರ ಸಾಹಿತ್ಯ ಹಾಡುಗಳಿಗೆ ಇದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed