ಡಾ||ವಿ.ನಾಗೇಂದ್ರಪ್ರಸಾದ್ ಅವರಿಂದ ಅನಾವರಣವಾಯಿತು ``ದ ಸೂಟ್``ಚಿತ್ರದ ಪೋಸ್ಟರ್
Posted date: 02 Sun, Apr 2023 08:49:29 PM
ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ "ದ ಸೂಟ್" ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ನೀರ್ ದೋಸೆ ನಿರ್ದೇಶಕರಾದ ವಿಜಯ್ ಪ್ರಸಾದ್ ಮತ್ತು ನಿರ್ಮಾಪಕರು ನಾಗೇಶ್ ಕುಮಾರ್  ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದರು.

ನಾನು ಕಾಶಿನಾಥ್ ಅವರ ಬಳಿ ಕೆಲಸ ಮಾಡಿದ್ದೆ. ಈ ಚಿತ್ರದ ಕಥೆಯನ್ನು ಅವರಿಗೆ ಹೇಳಿದ್ದೆ.  ಅವರು ಕೂಡ ಕಥೆ ಮೆಚ್ಚಿಕೊಂಡು ಮನಸಾರೆ ಹಾರೈಸಿದ್ದರು. ಇದು ನನ್ನ ನಿರ್ದೇಶನದ ಮೊದಲ ಚಿತ್ರ.  ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ನಮ್ಮ ಚಿತ್ರದಲ್ಲಿ ನಾವು ಧರಿಸುವ ಸೂಟೇ ಪ್ರಮುಖ ಪಾತ್ರಧಾರಿ. ಸೂಟ್ ಗೆ ಅದರದೇ ಆದ ವಿಶೇಷತೆ ಇದೆ. ಮದುವೆ, ಮೀಟಿಂಗ್ ಮುಂತಾದ  ಕಡೆ ಸೂಟ್ ಧರಿಸಿದರೆ, ಒಂದು ವಿಶೇಷ ಕಳೆ. ಎಷ್ಟೋ ವಿವಾಹಗಳು  ಸೂಟು - ಬೂಟು ಕೊಡಲಿಲ್ಲ ಅಂತ ಮದುವೆ  ನಿಂತದ್ದು ಇದೆ. ಕುವೆಂಪು, ಸರ್ ಎಂ ವಿಶ್ವೇಶ್ವರಯ್ಯ, ಅಂಬೇಡ್ಕರ್ . ಕಸ್ತೂರಿ ನಿವಾಸದ ಅಣ್ಣಾವ್ರು. ವಿಷ್ಣುವರ್ಧನ್. ಪುನೀತ್ ರಾಜ್ ಕುಮಾರ್  ಮುಂತಾದ ಗಣ್ಯರು ಸೂಟ್ ಧರಿಸುತ್ತಿದ್ದುದ್ದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ . ಇಂತಹ ತನ್ನದೇ ಆದ ಗತ್ತು ಇರುವ "ಸೂಟ್" ಬಗ್ಗೆ ನಮ್ಮ ಸಿನಿಮಾ ಕಥೆ ಇದೆ. ಮಾಲತಿ ಬಿ.ರಾಮಸ್ವಾಮಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ‌. ಕಿರಣ್ ಹಂಪಾಪುರ ನಮ್ಮ ಚಿತ್ರದ ಛಾಯಾಗ್ರಹಕರು ಹಾಗೂ ಸುರೇಶ್ ಡಿ.ಹೆಚ್ ಸಂಕಲನಕಾರು ಎಂದು "ದ ಸೂಟ್" ಚಿತ್ರದ ಬಗ್ಗೆ ನಿರ್ದೇಶಕ ಎಸ್ ಭಗತ್ ರಾಜ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸೂಟ್ ನಲ್ಲಿ  ಎಲ್ಲಾ ರೀತಿಯ 
ಭಾವನಾತ್ಮಕ ಭಾವನೆ ಅಡಗಿದೆ ಆದ್ದರಿಂದ ಸೂಟ್ (ಅಡಿ ಬರಹ- ಅತಿಥಿ ದೇವೋ ಭವ) ಈ ಚಿತ್ರದ ನಾಯಕ ಹಾಗೂ ನಾಯಕಿ. ಧಾನ್ವಿ. ಸುಜಯ್ ಆರ್ಯ. ಕಮಲ್ (ಕಲಿಮ್ ಪಾಶಾ) ಮಂಜುನಾಥ್ ಪಾಟೀಲ್, ಭೀಷ್ಮ ರಾಮಯ್ಯ  ದೀಪ್ತಿ ಕಾಪ್ಸೆ, ಡಾ||ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಸಿದ್ದಲಿಂಗು ಶ್ರೀಧರ್ , ಜೋಸೆಫ್ ಹಾಗೂ ರಂಗಭೂಮಿ ಮತ್ತು ರಾಜಕೀಯದ ಪ್ರಮುಖ ಗಣ್ಯರು ಚಿತ್ರದ ತಾರಾಬಳಗದಲ್ಲಿದ್ದಾರೆ. 

"ದ ಸೂಟ್" ಚಿತ್ರದ ಶೀರ್ಷಿಕೆ ನೊಂದಾಯಿಸಿ ಕನ್ನಡ ಚಿತ್ರರಂಗದ ನಿರ್ದೇಶಕರು, ಚಿತ್ರ ಸಾಹಿತಿಗಳು ಮತ್ತು ಸಾಹಿತಿಗಳು "ದ ಸೂಟ್" ಟೈಟಲ್ ಮೇಲೆ ಕವನಗಳು ಬರೆದಿದ್ದಾರೆ . ಅದು ಪುಸ್ತಕ ರೂಪದಲ್ಲಿ ಹೊರಬಂದಿದೆ.  ಕಾಶಿನಾಥ್. ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ,  ಪತ್ರಕರ್ತ ಜೋಗಿ, ವಿ.ಮನೋಹರ್ ಮುಂತಾದ ಗಣ್ಯರು ಈ ಪುಸ್ತಕ  ಬಿಡುಗಡೆಗೊಳಿಸಿ ಶುಭ ಕೋರಿದ್ದರು. ಆನಂತರ ಚಿತ್ರಿಕರಣ ಪ್ರಾರಂಭವಾಯಿತು .
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed