ಚೌಕ‌ ನಂತರ ಮತ್ತೊಂದು ತಂದೆ ಮಗಳ ಬಾಂಧವ್ಯದ ಹಾಡು ಜೂಲಿಯಟ್ 2 ಚಿತ್ರದಲ್ಲಿ ಭಾವಪೂರ್ಣ ಗೀತೆ*
Posted date: 06 Mon, Feb 2023 10:24:07 AM
ತಂದೆ ಮಗಳ‌ ನಡುವಿನ  ಬಾಂಧವ್ಯದ  ಕಥೆ  ಹೇಳುವ ಚಿತ್ರ  ಜ್ಯುಲಿಯೆಟ್ 2. ಮಹಿಳಾಪ್ರದಾನ ಕಥಾಹಂದರ ಹೊಂದಿರುವ  ಈ ಚಿತ್ರದಲ್ಲಿ  ತಂದೆಯನ್ನು ಕುರಿತಾಗಿ ಮಗಳ ಮನದಲ್ಲಿ ಮೂಡುವ ಭಾವನೆಗಳನ್ನು ಹಾಡಿನ ರೂಪದಲ್ಲಿ ಹೇಳಲಾಗಿದೆ. 
 
ಇತ್ತೀಚೆಗೆ  ಚಿತ್ರದ  ಈ ಭಾವಪೂರ್ಣ ಹಾಡು ಬಿಡುಗಡೆಯಾಗಿದ್ದು, ಎಲ್ಲಾ ಕಡೆ ವೈರಲ್ ಆಗುತ್ತಿದೆ. `ನೆನಪಲ್ಲಿ ಈಗ ಅವಳಿರದ ಜಾಗ`  ಎಂಬ ಸುಖೀರ್ತ್ ಶೆಟ್ಟಿ ಅವರ ಸಾಹಿತ್ಯವಿರುವ,  ತಂದೆ ಮಗಳ ನಡುವಿನ ಬಾಂಧವ್ಯದ ಕಥೆ ಹೇಳುವ ಈ ಹಾಡಿಗೆ  ಸಂದೀಪ್ ಆರ್.ಬಲ್ಲಾಳ್ ಅವರು  ರಾಗಸಂಯೋಜನೆ ಮಾಡಿದ್ದು,  ಮಲ್ಲಿಕಾ ಮಟ್ಟಿ ಅವರು  ಸುಶ್ರಾವ್ಯವಾಗಿ ಹಾಡಿದ್ದಾರೆ. ಆನಂದ್ ಆಡಿಯೋ ಈ ಹಾಡನ್ನು ಹೊರತಂದಿದ್ದು, ತಾಯಿಯ ಪ್ರೀತಿ ಕಳೆದುಕೊಂಡು ತಂದೆಯ ಬಾಂದವ್ಯದಲ್ಲಿ  ಬೆಳೆದಿರೋ ಪ್ರತೀ ಹೆಣ್ಣಿನ ಮನಮುಟ್ಟುವ ಹಾಡು ಇದಾಗಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಈ ಹಾಡಿಗೆ ಕೇಳುಗರಿಂದ ಅದ್ಭುತ ಪ್ರತಿಕ್ರಿಯೆ ಬರುತ್ತಿದ್ದು, ಈಗಾಗಲೇ ಆರೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿದೆ. ಪ್ರೇಮಂ ಪೂಜ್ಯಂ ಖ್ಯಾತಿಯ  ಬೃಂದಾ ಆಚಾರ್ಯ, ಜ್ಯೂಲಿಯೆಟ್ 2 ಚಿತ್ರದಲ್ಲಿ ನಾಯಕಿ ಜೂಲಿಯೆಟ್  ಪಾತ್ರ ನಿರ್ವಹಿಸಿದ್ದಾರೆ.
 
ತಂದೆ ಮಗಳ ನಡುವಿನ ಮಧುರ ಬಾಂಧವ್ಯದ ಸುತ್ತ ಹೆಣೆಯಲಾದ, ವುಮನ್ ಸೆಂಟ್ರಿಕ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ  ವಿರಾಟ್ ಬಿ. ಗೌಡ  ಅವರು ಕಥೆ, ಚಿತ್ರಕಥೆ  ಬರೆದು  ಆ್ಯಕ್ಷನ್ ಕಟ್ ಹೇಳಿದ್ದಾರೆ.  ಲಿಖಿತ್ ಆರ್. ಕೋಟ್ಯಾನ್ ಅವರು  ಈ ಚಿತ್ರವನ್ನು ನಿರ್ಮಿಸಿದ್ದಾರೆ.‌
 
ತನ್ನ ತಂದೆಯ ಕೊನೆಯ ಆಸೆಯನ್ನು ಈಡೇರಿಸಲು ಹುಟ್ಟೂರಿಗೆ ಬಂದು ನೆಲೆಸುವ ನಾಯಕಿ ಜೂಲಿಯಟ್ ಗೆ ಅಲ್ಲಿ ಏನೆಲ್ಲ ಅಡೆ ತಡೆಗಳು ಎದುರಾಗುತ್ತದೆ,  ಶಾಂತರೂಪಿಯಾದ ಹೆಣ್ಣಿಗೆ, ಏನಾದರೂ ತೊಂದರೆಯಾದಾಗ ಆಕೆ ಹೇಗೆ ದುರ್ಗೆಯ ಅವತಾರ  ತಾಳುತ್ತಾಳೆ ಎಂದು  ಈ ಚಿತ್ರದಲ್ಲಿ  ಹೇಳಲಾಗಿದೆ.  ಹೆಣ್ಣೊಬ್ಬಳಿಗೆ  ತನ್ನ ಜೀವನದಲ್ಲಿ  ಎಲ್ಲಾ ದಾರಿಗಳು ಮುಚ್ಚಿ ಹೋದಾಗ, ಆಕೆ ತನ್ನತನವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂದು ಈ ಚಿತ್ರದ ಮೂಲಕ ನಿರ್ದೇಶಕ ವಿರಾಟ್ ಬಿ.ಗೌಡ ಅವರು ಹೇಳಹೊರಟಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed