ಈವಾರ ತೆರೆಗೆ ಜನುಮದ ಜಾತ್ರೆ
Posted date: 21 Tue, Sep 2021 11:10:32 AM
ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್  . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯೋ ಪ್ರೇಮಕಥೆಯಾಗಿದ್ದರೂ, ಚಿತ್ರಕಥೆಯಲ್ಲಿ ಒಂದಷ್ಟು ಹೊಸ ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. ಪ್ರೇಮಿಗಳಿಬ್ಬರು ತಮ್ಮ ಮನೆಯಲ್ಲಿ  ಹಿರಿಯರನ್ನು ಎದುರಿಸಿ, ಅವರು ತಮ್ಮ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎನ್ನುವುದೇ ಜನುಮದ ಜಾತ್ರೆ ಚಿತ್ರದ ಕಥಾಹಂದರ.
ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ದೊಡ್ಮನೆ ಮಂಜುನಾಥ್. ಎಂ. ಅವರ ನಿರ್ಮಾಣದ ಈ ಚಿತ್ರದ ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ದುರ್ಗಾ ಪಿ.ಎಸ್. ಅವರ ಸಂಕಲನ ಹಾಗೂ ಜೆ.ಡಿ. ಅವರ ನೃತ್ಯ ನಿರ್ದೇಶನವಿದೆ. ಮದನ್ ಕುಮಾರ್, ಚೈತ್ರ,ಮಂಡ್ಯ ಕೆಂಪ,ಅಂಜಲಿ, ಮೈಕ್ರೋಟೆಕ್ ದೇವೇಂದ್ರ, ಭರತ್, ಜಯಂತಿ, ರೇಣುಕಾಂಬ, ಅಂಬರಿ ಪರಮೇಶ್, ಸೂರ್ಯ, ಪ್ರಶಾಂತ್ ಗುಗ್ರಿ, ಚಂದುರೆಡ್ಡಿ, ದಾಕ್ಷಾಯಣಿ, ಗುಣವತಿ, ಮಂಜುಳ ಹಾಸನ್, ಮಜುನಾಥ್ ಎಂ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed