ಮಾತು ಮುಗಿಸಿದ `ಗಗನಸಖಿ`
Posted date: 26/March/2009

ಸ್ಪುರದ್ರೂಪಿ ಯುವಕನೊಬ್ಬನ ಜೀವನದಲ್ಲಿ ನಡೆಯುವಂತಹ ಪ್ರೀತಿ-ಪ್ರೇಮ, ಹೆಣ್ಣಿನ ಪ್ರತೀಕಾರ, ಇಂತಹ ವಿಷಯಗಳನ್ನಿಟ್ಟುಕೊಂಡು ಒಂದು ಪ್ರೇಮಕಥೆ ಮಾಡಿದ್ದಾರೆ ನಿರ್ದೇಶಕ ಶಿವಕುಮಾರ್. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಇವರು ೧೮ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಹಳ ದಿನಗಳ ನಂತರ ಈಗ ಇವರೇ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ಗಗನಸಖಿ. ಈಗಾಗಲೇ ಚಿಕ್ಕಮಗಳೂರು ಸುತ್ತಮುತ್ತ ೨೭ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಶಿವಕುಮಾರ್ ಕಳೆದ ವಾರ ಅರುಣ್ ಧ್ವನಿಗ್ರಹಣ ಕೇಂದ್ರದಲ್ಲಿ ಸತತವಾಗಿ ೮ ದಿನಗಳ ಕಾಲ ಚಿತ್ರಕ್ಕೆ ಮಾತಿನ ಮರುಲೇಪನ ಕಾರ್ಯ ಮಾಡಿ ಮುಗಿಸಿದ್ದಾರೆ. ಒಂದೇ ರೂಪ ಹೊಂದಿರುವ ಇಬ್ಬರು ಯುವತಿಯರ ತದ್ವಿರುದ್ಧ ನಡವಳಿಕೆಯಿಂದ ಯುವಕನೊಬ್ಬ ಯಾವ ರೀತಿ ತೊಂದರೆಗಳನ್ನನುಭವಿಸಿದನು ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಅಲ್ಲದೆ, ಇಂದಿನ ಯುವತಿಯರಿಗೆ ಒಂದು ಸಂದೇಶವನ್ನು ಕೂಡ ಹೇಳಿದ್ದಾರೆ. ನಾಗರಾಜ್, ರಾಮಾಂಜನೇಯ ಹಾಗೂ ರಾಮಚಂದ್ರಪ್ಪ ಅವರ ನಿರ್ಮಾಣದ ಈ ಚಿತ್ರಕ್ಕೆ ಮುತ್ತುರಾಜ್ ಅವರ ಛಾಯಾಗ್ರಹಣ, ಗಂಧರ್ವ ಅವರ ಸಂಗೀತ ಸಂಯೋಜನೆ ಇದ್ದು, ಡಾ|| ಮಾಧವನ್, ಭಾವನಿ ಗಾಂಧಿ (ದ್ವಿಪಾತ್ರ), ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ಸುರೇಶ್ ದಾವಣಗೆರೆ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed