ಮೂರು ಮತ್ತೊಂದು ಹಾರರ್‌ ಲವ್ ಸ್ಟೋರಿ
Posted date: 16 Thu, Sep 2021 09:56:05 AM
ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ ಅವರು ನಿರ್ಮಿಸುತ್ತಿರುವ "ಮೂರು ಮತ್ತೊಂದು" ಎನ್ನುವ ಹಾರರ್ ಹಿನ್ನೆಲೆಯ ಚಿತ್ರಕ್ಕೆ ಪ್ರಶಾಂತ್ ಅಂಕಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಶೇ.೭೦ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ೪ ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ವನ್ನು ಚಿಕ್ಕಮಗಳೂರು, ಸಕಲೇಶಪುರ, ಕುಶಾಲನಗರ, ಹಾಸನದ ಸುತ್ತಮುತ್ತ ನಡೆಸಲಾಗುತ್ತದೆ, ಈ ಚಿತ್ರದಲ್ಲಿ ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಜೊತೆಗೆ ವಿಭಿನ್ನ ಹಾರರ್ ಕಥಾಹಂದರವನ್ನು ಹೇಳಲಾಗಿದೆ.
ಮೂರು ಮತ್ತೊಂದು ಅಂದರೆ ಮೂವರ ನಡುವೆ ಬರುವ ಮತ್ತೊಬ್ಬ ವ್ಯಕ್ತಿ ಯಾರು ಅನ್ನೋದೇ ಚಿತ್ರದ ಸಸ್ಪೆನ್ಸ್. ಈ ಚಿತ್ರದ ನಾಯಕಿ ಮಮತಾ ನೃತ್ಯ ನಾಟಕ, ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದು, ಮೊದಲಬಾರಿಗೆ ನಿರ್ದೇಶಕರು ಅವಕಾಶ ನೀಡಿದ್ದಾರೆ. ಹರಹರ ಮಹಾದೇವ, ಜೈಹನುಮಾನ್ ,ಮಹಾಕಾಳಿ, ಶನಿ, ಗಟ್ಟಿಮೇಳ, ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜ್ ಮಣೀಶ್ ಈ ಚಿತ್ರದ ನಾಯಕ, ಉಳಿದ ತಾರಾಗಣದಲ್ಲಿ ಜೂ.ನರಸಿಂಹರಾಜು, ಮಂಡ್ಯ ಆನಂದ್, ಜಗದೀಶ್ ಮುಂತಾದವರು ನಟಿಸಿದ್ದಾರೆ. ಈ. ಚಿತ್ರಕ್ಕೆ ಸುರೇಶ್ ಬಾಬು ಅವರ ಛಾಯಾಗ್ರಹಣ, ಪಳನಿ ಸೇನಾಪತಿ ಅವರ ಸಂಗೀತ, ಕುಶಾಲ್ ಬರಗೂರು ಅವರ ಸಾಹಿತ್ಯ ಹಾಗೂ ಸಂಭಾಷಣೆ, ಹ್ಯಾರಿಸ್ ಜಾನಿ ಸಾಹಸ, ಕಲೈಮಾಸ್ಟರ್ ಅವರ ಕೊರಿಯಾಗ್ರಫಿ ಇದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed