ರೈತರ ಮನಮುಟ್ಟುವ ಸಧಬಿರುಚಿ ಚಿತ್ರ ಕಾಸಿನಸರ - 4/5****
Posted date: 04 Sat, Mar 2023 08:25:29 AM
ಆಧುನಿಕ ಕೃಷಿ, ರಸಗೊಬ್ಬರದ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕೃಷಿ ಪದ್ದತಿಯ ಮಹತ್ವವನ್ನು ತಿಳಿಸುವ ಜೊತೆಗೆ ಸಾವಯವ ಕೃಷಿಯಿಂದ ರೈತ ನಂಬಿದರೆ ಅನ್ನದಾತನನ್ನು ಕೈಹಿಡಿಯಲಿದೆ ಎನ್ನುವ ಸಂದೇಶ ಸಾರುವ ಚಿತ್ರ “ ಕಾಸಿನ ಸರ”
ಆಶ್ಚರ್ಯವಾಗಬಹುದು ಸಾಯವಯ ಕೃಷಿ ಪದ್ದತಿಯ ಬಗ್ಗೆ ಹೇಳುವ ಚಿತ್ರದಲ್ಲಿ ಕಾಸಿನಸರದ್ದು ಏನು ಕೆಲಸ ಅನ್ನುವುದು. ಚಿತ್ರದಲ್ಲಿ ಕೃಷಿಯಷ್ಟೇ ಮಹತ್ವವನ್ನು ಕಾಸಿನ ಸರವೂ ಪಡೆದುಕೊಂಡಿದೆ. ಈ ಕಾರಣಕ್ಕಾಗಿಯೇ ಕಾಸಿನಸರ ಚಿತ್ರವನ್ನು ಚಿತ್ರದ ಶೀರ್ಷಿಕೆಯಾಗಿ ಬಳಸಿದ್ದಾರೆ ನಿರ್ದೇಶಕರು
 
ತಲೆತಲಾಂತರದಿಂದ ಬಂದ ಕಾಸಿನ ಸರ ಸೊಸೆಯರಿಂದ ಅತ್ತೆಯರಿಂದ ಬಂದ ಬಳುವಳಿ. ಇದಕ್ಕಾಗಿ ನಡೆಯುವ ಮನೆಯ ಕಲಹ ಒಂದಎದೆಯಾದರೆ ಕೃಷಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಸುಂದರೇಶ್( ವಿಜಯ್ ರಾಘವೇಂದ್ರ) ಕೈ ತುಂಬ ಬರುವ ಕೆಲಸ ಬಿಟ್ಟು ಊರಲ್ಲಿ ಕೃಷಿ ಮಾಡುವ ಮತ್ತು ಆರಂಭದಲ್ಲಿ ನಗೆಪಾಟಲಿಗೆ ಒಳಗಾಗುವ ಕಥನವನ್ನು ಚಿತ್ರ ಒಳಗೊಂಡಿದೆ.
ಅದೇ ಕಾಲೇಜಿನ ಸಂಪಿಗೆಗೆ ( ಹರ್ಷಿಕಾ ಪೂಣಚ್ಚ) ಗೆ ಸುಂದರೇಶ್ ಮೇಲೆ ಪ್ರೀತಿ, ಖಡಕ್ ವ್ಯಕ್ತಿತ್ವದ ಸುಂದರೇಶ್ ಇದ್ದುದನ್ನು ಇದ್ದ ಹಾಗೆ ಹೇಳುವ ಜಾಯಮಾನದವ, ಈ ಕಾರಣಕ್ಕಾಗಿಯೇ ಮೊದಲು ಆಕೆಯನ್ನು ತಿರಸ್ಕಾರ ಮಾಡಿ ಬಿಡುತ್ತಾನೆ. ಹಠ ಸ್ವಭಾವ ಸಂಪಿಗೆ ತಂದೆ ತಾಯಿಯನ್ನು ಒಪ್ಪಿಸಿ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುತ್ತಾಳೆ.
 
ಈ ನಡುವೆ ಹಳ್ಳಿಯಲ್ಲಿ ಓದಿದ ಗಂಡ-ಹೆಂಡತಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿ ಕೃಷಿಕರಾಗಿ ಗುರುಸಿಕೊಳ್ಳುತ್ತಾರೆ. ಈ ಮೂಲಕ ಸಾವಯವ ಕೃಷಿ ರೈತನಿಗೆ ವರದಾನ ಎನ್ನುವ ಜೊತೆಗೆ ಭೂಮಿಯ ಆರೋಗ್ಯ ಕಾಪಾಡಲು ಸಹಕಾರಿ ಎನ್ನುವುದನ್ನು ಚಿತ್ರದ ಮೂಲಕ ನಿರ್ದೇಶಕ ಎನ್, ಆರ್ ನಂಜುಂಡೇಗೌಡ ಹೇಳಿದ್ದಾರೆ.ಇತ್ತೀಚಿನ ದಿನಮಾನಗಳಲ್ಲಿನ ಹೊಡಬಡಿ ಅಬ್ಬರದ ನಡುವೆ ಮನಮಂದಿಯೆಲ್ಲಾ ಕುಳಿತು sನೋಡಬಹುದಾದ ಚಿತ್ರ. 
 
ನಿರ್ದೇಶಕ ಎನ್.ಆರ್ ನಂಜುಂಡೇಗೌಡ ಅವರು, ಸಧಭಿರುಚಿಯ ಚಿತ್ರವನ್ನು ಎಲ್ಲರಿಗೂ ಇಷ್ಟವಾಗುವಂತೆ ಕಟ್ಟಿಕೊಟ್ಟಿದ್ದಾರೆ.ಹಿರಿಯ ಕಲಾವಿದೆ ಉಮಾಶ್ರೀ ,ನಟ ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಸಹಜ. ನೀನಾಸಂ ಅಶ್ವಥ್, ಸಂಗೀತ,ಹನುಂತೇಗೌಡ, ಮಂಡ್ಯ ರಮೇಶ್, ಸುಧಾ ಬೆಳವಾಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ.ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಧರಣಿ ಮಳೆ ಹೂಯ್ದು ಹಾಡು ಕಿವಿಗೆ ಹಿಂಪೆನಿಸುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed