ಸಾಯಿ ಚಿತ್ರಂ ಪ್ರೊಡಕ್ಸನ್ಸ್ ಲಾಂಛನದಲ್ಲಿ ಕಪ್ಪೆಟ್ಟು ಜನಾರ್ಧನ ನಾಯಕ್ ನಿರ್ಮಿಸಿರುವ ಪುಟ್ಟ ಭಯ ಮಕ್ಕಳ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೆಟ್ ನೀಡಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಉಡುಪಿಯ ನವ್ಯ ಜೆ ನಾಯಕ್. ಛಾಯಾಗ್ರಹಣ- ರೋಹಿತ್ ಅಂಪರ್, ಸಂಕಲನ- ಹರೀಶ್ ಕಿರಣ್ ತುಂಗ & ಪ್ರತೀಕ್ಷ, ಸಾಹಿತ್ಯ - ನವ್ಯ ಜೆ ನಾಯಕ್, ಸಹನಿರ್ದೇಶನ - ಕುಮಾರ್, ಕಲೆ-ಮಹೇಶ್ ಚಂಡ್ನಲ್, ತಾರಾಗಣದಲ್ಲಿ - ಸುಂದರಶ್ರೀ, ಅನನ್ಯ ಮೋಹನ್, ರಾಘವ ಶೆಟ್ಟಿ, ಸಮೃದ್ಧಿ, ಶಿಲ್ಪಶೆಟ್ಟಿ, ಅಂಬುಜಮ್ಮ, ಸುಲದಾಬುಭಾಗಿ ರಮಣಅತ್ತೆ, ಮುಂತಾದವರಿದ್ದಾರೆ. ಸಂತೋಷದಿಂದ ಆಡಿಕೊಂಡಿರುವ ಭಾಗಿ ಎಂಬ ಹುಡುಗಿ ತನ್ನ ಜೀವನದಲ್ಲಿ ಭಯದಿಂದ ಮುಳುಗಿರುವ ಕಥೆಯಾಗಿದೆ. ಯಾರಿಂದ ಆಕೆಗೆ ಭಯ ಉಂಟಾಗುತ್ತದೆ ಮತ್ತು ಆ ಭಯವನ್ನು ಅವಳು ಹೇಗೆ ಎದುರಿಸುತ್ತಾಳೆ ಮತ್ತು ಆ ಭಯದಿಂದ ಹೇಗೆ ಹೊರಬರುತ್ತಾಳೆ ಎಂಬುವ ಕಥಾಸಾರಾಂಶ.