ಹಿರಿಯ ನಟ ದತ್ತಣ್ಣ ಅವರಿಂದ ಬಿಡುಗಡೆಯಾಯಿತು``SCAM (1770)``ಚಿತ್ರದ ಟೀಸರ್
Posted date: 17 Mon, Apr 2023 11:44:11 AM
ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕುರಿತಾದ   "SCAM (1770)" ಚಿತ್ರದ ಟೀಸರ್ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಹಿರಿಯ ನಟ ದತ್ತಣ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ‌ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗ 92 ಅಂಕ ಪಡೆದರೆ ಅವರೆ ಮೊದಲು. ಈಗ 99 ಬಂದರೂ ಸಾಕಾಗುವುದಿಲ್ಲ ಎನ್ನುತ್ತಾರೆ. ಶಿಕ್ಷಣದ ವ್ಯವಸ್ಥೆಯಲ್ಲಿ ನಡೆಯುತ್ತಿರುವ "scam" ಬಗ್ಗೆ ಈ ಚಿತ್ರ ಬರುತ್ತಿದೆ‌ .  ಚಿತ್ರ ಯಶಸ್ವಿಯಾಗಲಿ ಎಂದು ದತ್ತಣ್ಣ ಹಾರೈಸಿದರು. 

ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಿದು. ನಾನು ಕೂಡ ಶಿಕ್ಷಣ ವ್ಯವಸ್ಥೆ ಕುರಿತಾದ ಎಷ್ಟೋ ಕೇಸ್ ಗಳನ್ನು ತೆಗೆದುಕೊಂಡಿದ್ದೇನೆ. ನಾವಿಬ್ಬರು ಸೇರಿ ಬರೆದ ಕಥೆ ನಿರ್ಮಾಪಕರಿಗೆ ಇಷ್ಟವಾಯಿತು ಎಂದು ಇಂದು ನಟೇಶ್(ವೈದ್ಯೆ) ಹಾಗೂ ನೇತ್ರಾವತಿ (ಅಡ್ವೊಕೇಟ್)ತಿಳಿಸಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ SCAM (1770). ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಿದು. ಟೀಸರ್ ಬಿಡುಗಡೆ ಮಾಡಿಕೊಟ್ಟ ದತ್ತಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ  ಎಂದರು ನಿರ್ದೇಶಕ ವಿಕಾಸ್ ಪುಷ್ಪಗಿರಿ. 

ಡಿ.ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡಿರುವ ದೇವರಾಜ್ ಅವರು ಚಿತ್ರದ ಮಾತನಾಡಿದರು. 

ನಾಯಕ ರಂಜನ್("ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ" ಚಿತ್ರದ ಖ್ಯಾತಿ),  ನಿಶ್ಚಿತ, ಹರಿಣಿ, ನಾರಾಯಣಸ್ವಾಮಿ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ನಿರ್ದೇಶಕರ ಜೊತೆಗೂಡಿ ಚಿತ್ರಕಥೆ ಬರೆಯುತ್ತಿರುವ ಶಂಕರ್ ರಾಮನ್ ಮುಂತಾದ ಚಿತ್ರತಂಡದ ಸದಸ್ಯರು "SCAM (1770)" ಚಿತ್ರದ ಕುರಿತು ಮಾಹಿತಿ ನೀಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed