ಕ್ರೈಂ ಥ್ರಿಲ್ಲರ್ `ವೈಟ್ ಅಂಡ್ ಬ್ಲ್ಯಾಕ್` ವೆಬ್ ಸೀರೀಸ್ ಗೆ ಅಪಾರ ಮೆಚ್ಚುಗೆ - ಯುವ ಪ್ರತಿಭೆ ಅಭಿನಂದನ್ ನಿರ್ದೇಶನದ ಚೊಚ್ಚಲ ವೆಬ್ ಸೀರೀಸ್
Posted date: 29 Wed, Mar 2023 07:07:12 AM
ಕ್ರೈಂ ಥ್ರಿಲ್ಲರ್, ಸೈನ್ಸ್ ಫಿಕ್ಷನ್ ವೆಬ್ ಸರಣಿಯೊಂದು ಕನ್ನಡದಲ್ಲಿ ನಿರ್ಮಾಣವಾಗಿ ಬಿಡುಗಡೆಗೊಂಡು ಎಲ್ಲರ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳ ವಿನೂತನ ಪ್ರಯತ್ನವಿರುವ ಈ ವೆಬ್ ಸರಣಿ ಹೆಸರು `ವೈಟ್ ಅಂಡ್ ಬ್ಲ್ಯಾಕ್`. ಜೋಗೇಶ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ‘ವೈಟ್ ಅಂಡ್ ಬ್ಲ್ಯಾಕ್’ ವೆಬ್ ಸರಣಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಅಭಿನಂದನ್ ಕಥೆ ಬರೆದು ನಿರ್ದೇಶನ ಮಾಡಿರುವ ಮೊದಲ ವೆಬ್ ಸರಣಿಯಿದು. ರಂಗಭೂಮಿ ಕಲಾವಿದನಾಗಿ, ಬರಹಗಾರನಾಗಿ ಅಭಿನಂದನ್ ಗುರುತಿಸಿಕೊಂಡಿದ್ದಾರೆ. ಹಲವು ನಾಟಕಗಳಿಗೆ ಕಥೆ ಬರೆದು ನಿರ್ದೇಶಿಸಿರುವ ಅನುಭವ ಇವರಿಗಿದ್ದು, ತಮ್ಮ ಮೊದಲ ವೆಬ್ ಸರಣಿಗೂ ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರು ಹಾಗೂ ಪ್ರತಿಭಾವಂತ ಯುವ ತಾಂತ್ರಿಕ ವರ್ಗವನ್ನು ಬಳಸಿಕೊಂಡು ಪ್ರಾಮಿಸಿಂಗ್ ವೆಬ್ ಸರಣಿಯನ್ನು ನೀಡಿ ಗಮನ ಸೆಳೆಯುತ್ತಿದ್ದಾರೆ ಅಭಿನಂದನ್. 

`ರಾಮಾ ರಾಮಾ ರೇ` ಖ್ಯಾತಿಯ ನಿರ್ದೇಶಕ ಸತ್ಯ ವೆಬ್ ಸೀರೀಸ್ ಕಂಟೆಂಟ್ ಮೆಚ್ಚಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ನೋಡುಗರು ಕೂಡ ತಂಡದ ಪ್ಯಾಶನ್, ಕಂಟೆಂಟ್, ಅದನ್ನು ತೆರೆ ಮೇಲೆ ಕಟ್ಟಿಕೊಟ್ಟ ರೀತಿಗೆ ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮೊದಲ ಕನಸಿಗೆ, ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹ ಸಿಗುತ್ತಿರುವುದು ನಿರ್ದೇಶಕ ಅಭಿನಂದನ್ ಹಾಗೂ ತಂಡಕ್ಕೆ ಸಂತಸ ತಂದಿದೆ. 

ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವ ಈ ವೆಬ್ ಸೀರೀಸ್ ನಲ್ಲಿ ಸತ್ಯ ಸೀರಿಯಲ್ ಬಾಲಾ ಪಾತ್ರಧಾರಿ ಶಶಿ ರಾಜ್, ಪ್ರಿಯಾಂಕ ಪ್ರಕಾಶ್, ಚನ್ನಕೇಶವ.ಜಿ, ಸವಿತ NSD ಒಳಗೊಂಡ ತಾರಾಗಣವಿದೆ. ಕಮಲ್.ವಿ ಛಾಯಾಗ್ರಹಣ, ಸತ್ಯ ರಾಧಕೃಷ್ಣ ಸಂಗೀತ ನಿರ್ದೇಶನದಲ್ಲಿ `ವೈಟ್ ಅಂಡ್ ಬ್ಲ್ಯಾಕ್` ಮೂಡಿ ಬಂದಿದೆ. ಜೋಗೇಶ್ ಫಿಲಂಸ್ ಬ್ಯಾನರ್ ನಡಿ ಚಿತ್ರದುರ್ಗ ಸಿದ್ದಯ್ಯ ಜೋಗೇಶ್ ವೆಬ್ ಸೀರೀಸ್ ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed