ಟಕೀಲಾ ಚಿತ್ರಕ್ಕೆ ಹಾಡೊಂದು ಬಾಕಿ
Posted date: 20 Mon, Mar 2023 03:30:46 PM
ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ (ವಿದ್ಯಾರ್ಥಿ, ಮುನಿಯ, ಜನ್‌ಧನ್ ನಿರ್ದೇಶಕ) ನಿರ್ಮಿಸುತ್ತಿರುವ ಟಕೀಲಾಚಿತ್ರಕ್ಕೆ ಟೈಟಲ್ ಸಾಂಗ್‌ನ ಚಿತ್ರೀಕರಣ ಮುಂದಿನವಾರ ನಡೆಯಲಿದೆ.  ಈ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ   ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ನಿರ್ದೇಶನ, ಕೆ.ಪ್ರವೀಣ್ ನಾಯಕ್-ಇವರು ಹಿಂದೆ ಜಡ್ ಹೂಂ ಅಂತೀಯಾ ಉಹೂಂ ಅಂತೀಯಾ ಮೀಸೆ ಚಿಗುರಿದಾಗ ಚಿತ್ರಗಳನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಸಂಗೀತ-ಟಾಪ್‌ಸ್ಟಾರ್ ರೆಣು, ಸಂಕಲನ-ಗಿರೀಶ್, ಕಲೆ-ಪ್ರಶಾಂತ್, ಸಹನಿರ್ಮಾಪಕರು-ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ, ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್, ಮುಂತಾದವರಿದ್ದಾರೆ. ಈ ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆದಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed