ಮತ್ತೆ ಥಿಯೇಟರ್‌ಗೆ ಬರಲು ಸಿದ್ಧನಾದ `ಕೊಡೆಮುರುಗ`ಮಾರ್ಚ್ 10ರಂದು ರಾಜ್ಯಾದ್ಯಂತ ತೆರೆಗೆ
Posted date: 05 Sun, Mar 2023 12:38:54 PM
2021ರ ಕೊರೋನಾ ಟೈಮ್‌ನಲ್ಲಿ ತೆರೆಗೆ ಬಂದು ಪ್ರೇಕ್ಷಕರಿಂದ, ಮಾದ್ಯಮಗಳಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ `ಕೊಡೆಮುರುಗ` ಸಿನಿಮಾ ಈಗ ಮತ್ತೆ ರಿಲೀಸ್ ಆಗುತ್ತಿದೆ. ಹೌದು `ಕೊಡೆಮುರುಗ` ಸಿನಿಮಾ ಇದೇ ಮಾರ್ಚ್ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಆ ಪ್ರಯುಕ್ತ ಇತ್ತೀಚೆಗೆ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಕೆ. ರವಿಕುಮಾರ್  ನಾವು ಈ ಮೊದಲು ಚಿತ್ರವನ್ನು ರಾಂಗ್ ಟೈಮ್‌ನಲ್ಲಿ ರಿಲೀಸ್ ಮಾಡಿದ್ವಿ. ಜನರಿಂದ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕಿದ್ದರೂ ಜನ ಥಿಯೇಟರ್‌ಗೆ ಬರುವ ಪರಿಸ್ಥಿತಿ ಇರಲಿಲ್ಲ. ಹಾಗಾಗಿ ನಾವು ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ ಪ್ರದರ್ಶನ ನಿಲ್ಲಿಸಿ, ಒಂದೊಳ್ಳೆ ಸಂದರ್ಭ ನೋಡಿಕೊಂಡು ಮರು ಬಿಡುಗಡೆ ಮಾಡುತ್ತೇವೆ ಎಂದಿದ್ದೇವು. ಆ ಪ್ರಕಾರ ಈಗ ಕೊಡೆಮುರುಗನನ್ನು ಇದೇ ಮಾರ್ಚ್ 10ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಒಂದು ಒಳ್ಳೆಯ ಸಿನಿಮಾ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಚಿತ್ರ ಕೊರೋನಾ ಟೈಮ್‌ನಲ್ಲಿ ರಿಲೀಸ್ ಆಗಿದ್ದರೂ, ಮೂರೇ ದಿನದಲ್ಲಿ ಒಂದಿಷ್ಟು ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು  ಎಂದು ಕೊಡೆಮುರುಗ ರೀ-ರಿಲೀಸ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಕೊಡೆಗೆ ಚತ್ರಿ ಎಂದು ಅರ್ಥ ಬಂದ್ರೆ ಮುರುಗ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಬರುವ ಒಂದು ಪಾತ್ರದ ಹೆಸರಾಗಿದೆ. ಈ ಅಂಶವನ್ನಿಟ್ಟುಕೊAಡು ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಸುಬ್ರಮಣ್ಯ ಪ್ರಸಾದ್ ಇದೇ ಮೊದಲಬಾರಿ ಈ ಸಿನಿಮಾದಲ್ಲಿ ಬಣ್ಣ ಕೂಡ ಹಚ್ಚಿದ್ದಾರೆ.  ನಾವು ರಿಲೀಸ್ ಆದ ಸಿನಿಮಾವನ್ನು ಮೂರು ದಿನಕ್ಕೆ ಸ್ಟಾಪ್ ಮಾಡಿದ್ವಿ. ನಂತರ ಈ ಸಮಯ ಸಂದರ್ಭಕ್ಕಾಗಿ ಕಾಯತಾ ಇದ್ವಿ. ಒಂದು ಸಿನಿಮಾ ಬಿಡುಗಡೆ ಎಂಬುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಈಗ ಮತ್ತೆ ರಿಸ್ಕ್ ತೆಗೆದುಕೊಂಡು ರೀ-ರಿಲೀಸ್ ರಿಲೀಸ್ ಮಾಡುತ್ತಿದ್ದಾರೆ ನಿರ್ಮಾಪಕರು. ಇಲ್ಲಿ ಕದ್ದವ ಕಳ್ಳನಲ್ಲ ಸಿಕ್ಕಿ ಹಾಕಿಕೊಂಡವ ಕಳ್ಳ. ಹಾಗಯೇ ನಾವು ಗೆಲ್ಲುವ ಸಲುವಾಗಿ ಸಿನಿಮಾ ಮಾಡಿದ್ದೇವೆ  ಎಂದು ಸಿನಿಮಾದಲ್ಲಿ ಬರುವ ನಿರ್ದೇಶಕನ ಪಾತ್ರ ನಿರ್ವಯಿಸಿರುವ ನಿರ್ದೇಶಕ ಸುಬ್ರಮಣ್ಯ ಹೇಳಿದರು. ಚಿತ್ರದ ನಾಯಕ ಮುನಿಕೃಷ್ಣ (ಕೊಡೆಮುರುಗ) ಮಾತನಾಡಿ  ಕೊರೋನಾ ಟೈಮ್‌ನಲ್ಲೂ ಒಂದೆರಡು ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಆಗಿತ್ತು ನಮ್ಮ ಸಿನಿಮಾ. ಈಗ ಮತ್ತೆ ಮಾರ್ಚ್ 10ರಂದು ರಾಜ್ಯಾದ್ಯಂತ ಬರತಾ ಇದ್ದೇವೆ. ನಿಮ್ಮಗಳ ಸಹಕಾರವಿರಲಿ  ಎಂದರು. 

ಈ ಚಿತ್ರದಲ್ಲಿ ಪ್ರತಿಭೆ ಇದ್ರೆ ಇಂಡಸ್ಟ್ರಿಯಲ್ಲಿ ಸಾದಿಸಬಹುದು ಎಂಬುದನ್ನು ತೋರಿಸಲಾಗಿದ್ದು, ಇದೊಂದು ಸಂಪೂರ್ಣ ಮನರಂಜನಾ ಸಿನಿಮಾ ಆಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಗೆ ಅಥಿತಿಯಾಗಿ ಆಗಮಿಸಿದ್ದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್  ಈ ಸಿನಿಮಾವನ್ನು ನಾನು ಮೊದಲು ನೋಡಿದ್ದೆ. ಅದ್ಭುತವಾಗಿ ಬಂದಿದೆ. ಫ್ಯಾಷನ್‌ನಿಂದ ಸಿನಿಮಾ ಮಾಡಲಾಗಿದ್ದು ರೀ-ರಿಲೀಸ್ ಮಾಡತಾ ಇರೋದು ಖುಷಿಯ ವಿಚಾರ ಎಂದರು ಮತ್ತೋರ್ವ ಅಥಿತಿ ಕಲಾವಿದ ಸ್ವಾಸ್ತಿಕ್ ಶಂಕರ್  ಚಿತ್ರ ತುಂಬಾ ಚನ್ನಾಗಿ ಬಂದಿದೆ. ಈ ಚಿತ್ರ ಗೆಲ್ಲಬೇಕು. ತಂಡಕ್ಕೆ ಒಳ್ಳೆಯದಾಗಲಿ  ಎಂದರು. ಇನ್ನು ನಾಯಕಿಯಾಗಿ ಪಲ್ಲವಿ ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶೇ. 80%ರಷ್ಟು ಸೆಟ್‌ನಲ್ಲಿಯೇ ಶೂಟಿಂಗ್ ಮಾಡಲಾಗಿರುವ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣ, ತ್ಯಾಗರಾಜ್ ಸಂಗೀತ, ಸಿ.ರವಿಚಂದ್ರನ್ ಸಂಕಲನ, ಭೂಷಣ್, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ. ಚಿತ್ರದ ತಾರಾಬಳಗದಲ್ಲಿ ಸ್ವಾತಿ ಗುರುದತ್, ಅರವಿಂದ ರಾವ್, ಅಸೋಕ್ ಶರ್ಮ, ರಾಕ್‌ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಇದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed