ಸಸ್ಪೆನ್ಸ್ ಥ್ರಿಲ್ಲರ್, ಮಾಟ ಮಂತ್ರ ಸೇರಿದಂತೆ ಭಾವನಾತ್ಮಕ ಕತೆಯ ತಿರುಳು ಹೊಂದಿರುವ ಕಥೆ ಹೊಂದಿರುವ ಚಿತ್ರ "ಅಂಬುಜ. ಈ ವಾರ ಬಿಡುಗಡೆಯಾಗಿದ್ದು ಗಮನ ಸೆಳದಿದೆ.
ನಿರ್ದೇಶಕ ಶ್ರೀನಿ ಹನುಮಂತರಾಜು, ಅಪರೂಪದ ಕಥೆಯನ್ನು ಚಿತ್ರರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕನ್ನಡದಲ್ಲಿ ಇತ್ತೀಚಿಗೆ ಅಪರೂಪದ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಈ ಮೂಲಕ ಪ್ರೇಕ್ಷಕರೂ ಕೂಡ ಸಿನಿಮಾಗೆ ಎಲ್ಲೆಡೆ ಜೈ ಎನ್ನುತ್ತಿದ್ದಾರೆ.
ಮೆಡಿಕಲ್ ಮಾಫಿಯಾ ಸುತ್ತ ಸಾಗುವ ಭಾವನಾತ್ಮಕ ತಿರಳು ಹೊಂದಿದೆ.ಕನ್ನಡದಲ್ಲಿ ವಿಭಿನ್ನ ಹಾಗು ಅಪರೂಪದ ವಿಷಯವನ್ನು ತೆರೆಗೆ ಕಟ್ಟಿಕೊಳ್ಳುವ ಮೂಲಕ ನಿರ್ದೇಶಕರು ತಮ್ಮ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ.
ಸಾಲು ಸಾಲು ಶವಗಳ ರಹಸ್ಯವನ್ನು ಭೇದಿಸಲು ಮುಂದಾಗುವ ಅಪರಾಧ ವರದಿಗಾರ್ತಿ ನಂದಿನಿ (Àುಭ ಪೂಂಜಾ)ಗೆ ಪ್ರಕರಣ ಪತ್ತೆ ಹಚ್ಚುವ ಹೋರಾಟದಲ್ಲಿ ಸಹದ್ಯೋಗಿ ಅರ್ಜುನ್ ( ದೀಪಕ್ ಸುಬ್ರಮಣ್ಯ) ಸಾಥ್ ನೀಡುತ್ತಾನೆ. ಆತನಿಗೆ ಮಗು ( ಬೇಬಿ ಆಕಾಂಕ್ಷ) ಸಿಗುತ್ತದೆ. ಇತ್ತ ನಂದಿನಿಗೆ ನಿದ್ದೆಯಲ್ಲಿ ನಡೆದುಕೊಂಡು ಹೋಗುವ ಕಾಯಿಲೆ ಬೇರೆ. ಆಕೆಗೆ ರಾತ್ರಿಯಲ್ಲಿ ನಡೆದುಕೊಂಡು ಹೋಗುವ ಭಯಾನಕ ಕಾಯಿಲೆ.
ಕೊಲೆಗಳ ರಹಸ್ಯ ಪತ್ತೆ ಮಾಡಲು ಹೋದಾಗ ಸಿಕ್ಕವಳೆ ಅಂಬುಜ ( ರಜನಿ). ಅಂಬುಜ ದೆವ್ವ. ಈಕೆ ದೆವ್ವ ಆಗಿದ್ದು ಯಾಕೆ. ಕೊಲೆಗಳ ಹಿಂದಿನ ಕಾರಣಗಳಾದರೂ ಏನು ಎನ್ನುವುದು ಕಥನ ಕುತೂಹಲದ ಸಂಗತಿ.
ನಿರ್ದೇಶಕ ಶ್ರೀನಿ ಹನುಮಂತರಾಜು ಕಾಮಿಡಿ, ಸೆಂಟಿಮೆಂಟ್ ಹಾಗು ಭಾವನಾತ್ಮಕ ಕಥೆಗಳಿಗೆ ಮನ ಮಿಡಿಯುವ ಸ್ಪರ್ಶ ನೀಡಿದ್ದಾರೆ ಜೊತೆ ಜೊತೆಗೆ ಚಿತ್ರದ ಕುತೂಹಲಗಳಿಗೆ ಉತ್ತರವನ್ನೂ ನೀಡಿದ್ದಾರೆ.ಕ್ಲೈಮಾಕ್ಸ್ ಅಂಬುಜ ಹೈಲೈಟ್ ಗಳಲ್ಲಿ ಒಂದು.
ನಟಿಯರಾದ ಶುಭ ಪೂಂಜಾ, ರಜನಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ದೀಪಕ್ ಸುಬ್ರಮಣ್ಯ, ಗೋವಿಂದಢಗೌಡ, ಬೇಬಿ ಆಕಾಂಕ್ಷ ಸೇರಿದಂತೆ ಪ್ರತಿ ಪಾತ್ರವೂ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಕನ್ನಡಕ್ಕೆ ನಿರ್ದೇಶಕ ಶ್ರೀನಿ ಉತ್ತಮ ಚಿತ್ರನೀಡಿದ್ದಾರೆ.