ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಿದ``ಹೊಟ್ಟೆಪಾಡು``
Posted date: 05 Wed, Apr 2023 03:11:09 PM
ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ಡಿ.ವಿ.ರಾಧ ಅವರು ನಿರ್ಮಿಸಿರುವ, ವಸಂತ್ ಸಂಗೀತ ನಿರ್ದೇಶನ, ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ಹೊಟ್ಟೆಪಾಡು" ಚಿತ್ರ ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಈ ಸಂತೋಷವನ್ನು ಸಂಭ್ರಮಿಸಲು ನಿರ್ಮಾಪಕರು ಸಮಾರಂಭ ಆಯೋಜಿಸಿದ್ದರು. ಚಿತ್ರದ ಯಶಸ್ಸಿಗೆ ಕಾರಣರಾದ ತಂಡದವರನ್ನು ಸನ್ಮಾನಿಸಿದರು. ಹಿರಿಯ ನಿರ್ದೇಶಕ ಓಂಸಾಯಿಪ್ರಕಾಶ್ ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
     
ನಾನು ನಾಯಕನಾಗುವ ಆಸೆ ಹೊತ್ತು ಇಪ್ಪತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವನು. ಆದರೆ, ಆ ಆಸೆ ಈಗ ಈಡೇರಿದೆ. ನಾಯಕನಾಗಲು ಬಂದ ನಾನು ಹಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆ. ನಂತರ ಸ್ವಲ್ಪ ದಿನಗಳ ಕಾಲ ಚಿತ್ರರಂಗದಿಂದ ದೂರವಾಗಿ, ಬೇರೆ ವ್ಯಾಪಾರ ಶುರು ಮಾಡಿದೆ. ಏನೇ ಮಾಡಿದರೂ, ನಾನು ನಾಯಕನಾಗಬೇಕೆಂಬ ಆಸೆ ನನ್ನ ಬಿಟ್ಟು ಹೋಗಲಿಲ್ಲ. ನಂತರ ನಾವೇ ಈ ಸಿನಿಮಾ ಶುರು ಮಾಡಿದ್ದೆವು. ನನ್ನ ಶ್ರೀಮತಿ ರಾಧ ಈ ಚಿತ್ರದ ನಿರ್ಮಾಪಕಿ.  ನಾನೇ ಸಂಗೀತ ನಿರ್ದೇಶನ ಹಾಗೂ ನಿರ್ದೇಶನ ಮಾಡಿದ್ದೇನೆ. "ಹೊಟ್ಟೆಪಾಡು" ಚಿತ್ರವನ್ನು ಈತನಕ ನೋಡಿರುವ ಜನರು ಪ್ರಶಂಸೆಯ ಮಾತುಗಳಾಡುತ್ತಿದ್ದಾರೆ. ಇದಕ್ಕಿಂತ ಸಂತೋಷ ಬೇರೇನು ಬೇಕು.. ನಿಮ್ಮೆಲ್ಲರ ಪ್ರೋತ್ಸಾಹ ನಮಗೆ ಸದಾ ಇರಲಿ ಎಂದರು ನಾಯಕ, ನಿರ್ದೇಶಕ ವಸಂತ್. 

ನಿರ್ಮಾಪಕಿ ಡಿ.ವಿ.ರಾಧ ಎಲ್ಲರಿಗೂ ಧನ್ಯವಾದ ತಿಳಿಸಿದರು.  ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಹಾಗೂ ತಂತ್ರಜ್ಞರು "ಹೊಟ್ಟೆಪಾಡು" ಚಿತ್ರದ ಕುರಿತು ಮಾತನಾಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed