ಬರ್ಗೆಟ್ ಬಸ್ಯಾ ರಾಜಾಜಿನಗರದಲ್ಲಿ
Posted date: 17 Mon, Apr 2023 11:35:36 AM
ಯರ್ರಂ ರೆಡ್ಡಿ ಪಿಚ್ಚರ‍್ಸ್ ಸಂಸೆಯ ಅಡಿಯಲ್ಲಿ  ಮೂಲತ: ಬಳ್ಳಾರಿಯವರಾದ ವೈ.ನಾಗಾರ್ಜುನ ರೆಡ್ಡಿಯವರು ನಿರ್ಮಿಸುತ್ತಿರುವ ಬರ್ಗೆಟ್ ಬಸ್ಯಾ ಚಿತ್ರದ ಚಿತ್ರೀಕರಣ ರಾಜಾಜಿನಗರ, ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆಯಿತು. ಈ ಚಿತ್ರವನ್ನು ರಿಶ್ ಹಿರೇಮಠ್, ಮೊದಲಬಾರಿಗೆ ನಿರ್ದೇಶಿಸಿದ್ದು, ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಇವರು ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದಿದ್ದು, ಕೆಲವು ನುರಿತ ನಿರ್ದೇಶಕರ ಬಳಿ ಕೆಲಸ ಕಲಿತು ಕೆಲವು ಕಿರು ಚಿತ್ರಗಳನ್ನು ಮಾಡಿದ್ದಾರೆ.
 
ಚಿತ್ರದ ನಾಯಕಿ ಸಂಗೀತ ಎನ್.ಸ್ವಾಮಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಛಾಯಾಗ್ರಹಣ -ಶಾಮ್ ಸೆಲ್ವಿನ್,  ಸಾಹಿತ್ಯ -ಪ್ರಕಾಶ್.ಜಿ. ಸಂಕಲನ-ಸಂಜಯ್ ರೆಡ್ಡಿ, ಅನುಜ್ ಎಸ್ ಪರಿವೃದ್ ರವರ ಸಂಗೀತ.  ಚಿತ್ರವನ್ನು ಬೆಂಗಳೂರು, ಸಕಲೇಶಪುರ, ತೀರ್ಥಹಳ್ಳಿ ಮುಂತಾದ ಸ್ಥಳಗಳು ಚಿತ್ರೀಕರಣಕ್ಕೆ ಆಯ್ಕೆಯಾಗಿದೆ. ಕಂಡ ಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಎಂದು ಬರ್ಗೆಟ್ ಬಸ್ಯ ಎನ್ನುವ ಪಾತ್ರಧಾರಿ ಅವರನ್ನು ಹಿಂಬಾಲಿಸುವುದರ ಬಗ್ಗೆ ಕಥಾವಸ್ತುವಿದೆ.  ಇದನ್ನು ಸಂಪೂರ್ಣ ಹಾಸ್ಯ ರೂಪದಾಲ್ಲಿ ತರಲಾಗುತ್ತೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed