ಕನ್ನಡದ ಜೊತೆಗೆ ತಮಿಳು,ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ ರಾಜಶ್ರೀ ಪೊನ್ನಪ್ಪ.
ಇದೀಗ ಹಲವಾರು ಹೊಸತನದೊಂದಿಗೆ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ `ತತ್ಮ ತದ್ಭವ` ಚಿತ್ರದಲ್ಲಿ `ಶಾಲಿನಿ` ಪಾತ್ರಕ್ಕೆ ಬಣ್ಣ ಹಚ್ಚಿ ಸಿನಿಪ್ರಿಯರ ಗಮನ ಸೆಳೆಯಲಿದ್ದಾರೆ ರಾಜಶ್ರೀ ಪೊನ್ನಪ್ಪ.
"ತತ್ಸಮ ತದ್ಭವ ಚಿತ್ರದ ಶಾಲಿನಿಯ ಮುದ್ದಾದ ಪಾತ್ರವನ್ನು ನಾನು ತುಂಬಾ ಇಷ್ಟಪಟ್ಟೆ. ಕೊನೆಯವರೆಗೂ ಕುತೂಹಲ ಮೂಡಿಸುವ ಈ ಚಿತ್ರ ನಿಮ್ಮನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ".
- ರಾಜಶ್ರೀ ಪೊನ್ನಪ್ಪ