ಉಲ್ಲಾಸ್ ಎಂಟಪ್ರೈಸಸ್ `ನಿರ್ಮಲ` ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ
Posted date: 02 Thu, Feb 2023 10:51:00 AM
ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ `ನಿರ್ಮಲ` ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಅವಾರ್ಡ್ ಪಡೆದುಕೊಂಡಿದೆ. ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಜರ್ಮನ್, ಥಾಯ್, ಇಟಲಿ, ಉಕ್ರೇನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಯ ಮಕ್ಕಳ ಸಿನಿಮಾಗಳ ನಡುವೆ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಥಾಯ್ಲೆಂಡ್ ಮಾಜಿ ಪ್ರಧಾನಿ ಪ್ರಶಸ್ತಿಯನ್ನು ಪ್ರಧಾನ ಮಾಡುವ ಮೂಲಕ ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 
ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಮೂರನೇ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ಇದಾಗಿದ್ದು, ಕರ್ನಾಟಕದಿಂದ ಮಕ್ಕಳ ಚಿತ್ರವಾಗಿ`ನಿರ್ಮಲ` ಸಿನಿಮಾ ಮಾತ್ರ ಆಯ್ಕೆ ಆಗಿತ್ತು. ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಪ್ರಶಸ್ತಿ ರೇಸ್ ನಲ್ಲಿದ್ದರೂ ಅಂತಿಮವಾಗಿ ನಮ್ಮ ಬ್ಯಾನರ್ ನಿರ್ಮಾಣದ `ನಿರ್ಮಲ` ಸಿನಿಮಾ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕ್ಯಾಮೆರಾ ಮ್ಯಾನ್ ಹಾಗೂ ಪ್ರೊಡಕ್ಷನ್ ಹೊರತು ಪಡಿಸಿ ಎಲ್ಲಾ ವಿಭಾಗದಲ್ಲೂ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಸೇರಿ ಮಾಡಿರುವ ಸಿನಿಮಾವಿದು. ನಿರ್ದೇಶನ, ನಟನೆ, ಸಂಕಲನ, ಮೇಕಪ್, ಮ್ಯೂಸಿಕ್ ಎಲ್ಲವನ್ನು ಮಕ್ಕಳೇ ಮಾಡಿರೋದು ಈ ಚಿತ್ರದ ವಿಶೇಷ. ಅಲ್ಲಿ ಬಂದವರೆಲ್ಲ ಸಿನಿಮಾ ಬಗ್ಗೆ ಕೇಳಿ ಆಶ್ಚರ್ಯ ಹಾಗೂ ಹರುಷ ವ್ಯಕ್ತಪಡಿಸಿದ್ರು ಎಂದು ಚಿತ್ರದ ನಿರ್ಮಾಪಕ ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನ ಉಲ್ಲಾಸ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. 

ಬೆಂಗಳೂರು ಇಂಟರ್ ನ್ಯಾಶನಲ್ ಫೆಸ್ಟಿವಲ್ ಗೆ ಆಯ್ಕೆ ಆಗಿ ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವಾಗ ಕೋವಿಡ್ ಬಂತು. ಆನ್ ಲೈನ್ ನಲ್ಲಿ ಹಲವು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಬ್ಯಾಂಕಾಕ್ ಇಂಟರ್ ನ್ಯಾಶನಲ್ ಫೆಸ್ಟಿವಲ್ ನಲ್ಲಿ ಈ ಸಿನಿಮಾ ಆಯ್ಕೆ ಆಗಿ ಪ್ರಶಸ್ತಿ ಪಡೆದುಕೊಂಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಖುಷಿ ಕೊಟ್ಟಿದೆ. ನಮ್ಮ ಬ್ಯಾನರ್ ನಲ್ಲಿ ಇಂತಹದೊಂದು ಸಿನಿಮಾ ಮೂಡಿ ಬಂದಿರೋದು ಹೆಮ್ಮೆ ಎನಿಸುತ್ತದೆ ಎಂದು ಭಾ.ಮ.ಹರೀಶ್ ಸಂತಸ ಹಂಚಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed