ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ಪಿಆರ್‍ಕೆ ಪ್ರೋಡಕ್ಷನ್ ನಿಂದ ನಿರ್ಮಾಣ ಮಾಡುವ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಕಥೆ ಕಲಾವಿದರು ಸಿಗಬೇಕು. ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುವ ಸಂಸ್ಥೆಗಳಲ್ಲಿ ಕಂಟೆಂಟ್ ಮತ್ತು ಮೇಕಿಂಗ್ ಕಡೆ ಹೆಚ್ಚಿನ ಗಮನ ಹರಿಸುತ್ತೇವೆ. ಜೊತೆಗೆ ಸಿನಿಮಾ ಜನರಿಗೆ ಇಷ್ಟವಾಗಬೇಕು ಎಂದರು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್.
ಅತ್ತೆ ಪಾರ್ವತಮ್ಮ ರಾಜ್‍ಕುಮಾರ್ ಅವರ ಸ್ಪೂರ್ತಿ, ಪತಿ ಪುನೀತ್ ರಾಜ್‍ಕುಮಾರ್ ಅವರಿಗಿದ್ದ ಸಿನಿಮಾ ಮೇಲಿನ ಫ್ಯಾಶನ್ ಚಿತ್ರ ನಿರ್ಮಾಣಕ್ಕೆ ಪ್ರೇರೇಪಿಸಿದೆ. ಹೊಸ ಕಲಾವಿದರು, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಸಂಸ್ಥೆಯ ಉದ್ದೇಶ ಎಂದರು.
ಆಚಾರ್ ಅಂಡ್ ಕೋ ಚಿತ್ರದ ಕತೆಯನ್ನು.ಪುನೀತ್ ರಾಜ್ ಕುಮಾರ್ ಇದ್ದಾಗಲೇ ಕಥೆ ಕೇಳಿ ಒಪ್ಪಿಕೊಂಡಿದ್ದರು. 60ರ ದಶಕದ ಕಾಮಿಡಿ, ಫ್ಯಾಮಿಲಿ ಎಂಟಟೈನ್ ಮೆಂಟ್ ಸಿನಿಮಾ “ಆಚಾರ್ ಅಂಡ್ ಕೋ” ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಸಹಜವಾಗಿ ಭಯವಾಗುತ್ತಿದೆ. ಪರೀಕ್ಷೆ ಬರೆದಿದ್ದೇವೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಕಥೆ ಇಷ್ಟವಾದರೆ ನಿರ್ದೇಶಕರಿಗೆ ಸ್ವಾತಂತ್ರ್ಯ ನೀಡುತ್ತೇವೆ. ಕೆಲ ಸಣ್ಣ ಪುಟ್ಟ ಸಲಹೆ ನೀಡುತ್ತೇವೆ.ಅದನ್ನು ಕೊನಗೆ ಸ್ವೀಕರಿಸುವುದು ಬಿಡುವುದು ಅಂತಿಮವಾಗಿ ನಿರ್ದೇಶಕರಿಗೆ ಬಿಟ್ಟವಿಷಯ. ಇದನ್ನು ಪುನೀತ್ ರಾಜ್‍ಕುಮಾರ್ ಅವರಿಂದ ಕಲಿತದ್ದು, ಹೊಸ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿಕೊಂಡರು.
ಪಿಆರ್‍ಕೆ ಸಂಸ್ಥೆ ನಿರ್ಮಾಣ ಮಾಡುವ ಪ್ರತಿಯೊಂದು ಚಿತ್ರದ ಹಿಂದೆ ಮೂರು ಮಂದಿ ನಿರ್ದೇಶಕರ ಪಾತ್ರ ಇದೆ. ಕಥೆ ಮೊದಲು ನನಗೆ
ಇಷ್ಟವಾದರೆ ಅದನ್ನು ಈ ಮೂರು ಮಂದಿಗೆ ಕಳುಹಿಸುವೆ. ಅವರೂ ಇಷ್ಟಪಟ್ಟು, ಕೆಲ ಸಲಹೆ ಸೂಚನೆ ನೀಡಿದ ಬಳಿಕ ಚಿತ್ರರೂಪಕ್ಕೆ ಬರಲಿದೆ. ಜೊತೆಗೆ ಸತೀಶ್ ಕೂಡ ಎಂದು ಹೇಳಿದರು.
ದೊಡ್ಡ ಮಗಳು ಓದಿನ ಕಡೆ ಗಮನ ಹರಿಸಿದ್ದಾರೆ. ಚಿಕ್ಕ ಮಗಳಿಗೆ ಸಿನಿಮಾ ಬಗ್ಗೆ ಆಸಕ್ತಿ ಇದೆ. ಅದು ತಂತ್ರಜ್ಞರಾಗಬೇಕು ಎನ್ನುವ ಆಸೆ. ಆಗಾಗ ವಿನಯ್ ರಾಜ್‍ಕುಮಾರ್, ಯುವರಾಜ್ ಕುಮಾರ್ ಜೊತೆ ಚರ್ಚೆ ಮಾಡುತ್ತಾರೆ. ವಿನಯ್ ಕೂಡ ಅವರಿಗೆ ಬಂದ ಕತೆಗಳ ಬಗ್ಗೆ ಚರ್ಚೆ ಮಾಡ್ತಾರೆ. ಯುವ ಇನ್ನೂ ಮೊದಲ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಮಾಡುವುದು ನಮ್ಮ ಉದ್ದೇಶ ಎಂದರು ಅಶ್ವಿನಿ ಪುನೀತ್ ರಾಜ್‍ಕುಮಾರ್.
ಇನ್ನೂ ಮೆಡಿಕಲ್, ಥ್ರಿಲ್ಲರ್ ನಿಂದ ಕೂಡಿದ “ಒ2” ಸಿನಿಮಾ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಆಶಿಕಾ ರಂಗನಾಥ್ ಚಿತ್ರದಲ್ಲಿದ್ದಾರೆ ಉಳಿದಂತೆ ಎಲ್ಲಾ ಹೊಸಬರು ಎಂದು ಮಾಹಿತಿ ನೀಡಿದರು.