ರುಪ್ಪೀಸ್ ನಲ್ಲಿ ?ಅರುಂಧತಿ?
Posted date: 7/April/2009

ದುನಿಯಾ ರಶ್ಮಿ ಅಭಿನಯಿಸುತ್ತಿರುವ ಬಿ.ಆರ್. ಕೇಶವ್ ನಿರ್ದೇಶನದ ಚಿತ್ರ ಅರುಂಧತಿ ಚಿತ್ರದ ಹಾಡೊಂದರ ಚಿತ್ರೀಕರಣ ನಗರದ ಹೊರವಲಯದಲ್ಲಿರುವ ಉಪೇಂದ್ರ ಅವರ ರುಪ್ಪೀಸ್ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ಮಹೇಶ್ ಗಾಂಧಿ ಹಾಗೂ ರಶ್ಮಿ ಭಾಗವಹಿಸಿದ್ದರು. ಕಳೆದ ೨೭ರಿಂದ ಪ್ರಾರಂಭವಾಗಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.೨೫ರಷ್ಟು ಮುಕ್ತಾಯವಾಗಿದೆ. ಇದೊಂದು ನಾಯಕಿ ಪ್ರಧಾನ ಕಥಾನಕವಾಗಿದ್ದರೂ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕ್ರೈಂ ಇಡೀ ಕಥೆಯಲ್ಲಿ ಎದ್ದು ಕಾಣುತ್ತದೆ.  ಅಲ್ಲದೆ, ತೆಲುಗಿನ ಅರುಂಧತಿಗೂ ಈ ಚಿತ್ರ ಯಾವುದೇ ಹೋಲಿಕೆಯಿಲ್ಲ.  ಅದೇ ಬೇರೆ ಕಥೆ, ಇದೇ ಬೇರೆ ಕಥೆಯಾಗಿದೆ ಎನ್ನುತ್ತಾರೆ ನಿರ್ದೇಶಕ ಬಿ.ಆರ್. ಕೇಶವ್. ಎಂ.ಎಸ್. ಮಾರುತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ, ಮೋಹನ್ ಜುನೇಜಾರ ಸಂಭಾಷಣೆ, ಪ್ರಸಾದ್‌ರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಬ್ಯಾಂಕ್ ಜನಾರ್ಧನ್, ಸ್ವಸ್ತಿಕ್ ಶಂಕರ್, ಜಯಲಕ್ಷ್ಮಿ, ವಿಕ್ರಮ್ ಉದಯ್‌ಕುಮಾರ್, ಮೋಹನ್ ಜುನೇಜಾ, ಚಂದ್ರಕಲಾ ಮೋಹನ್ ಉಳಿದ ತಾರಾಗಣದಲ್ಲಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed