ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ಕ್ಯಾನೆಸ್ ಹಬ್ಬ ಫ್ರಾನ್ಸ್ ನಲ್ಲಿ ನಡೆಯುತ್ತಿದೆ. ಬಾಲಿವುಡ್ ತಾರೆಯರು ಭಿನ್ನ ವಿಭಿನ್ನ ಉಡುಗೆ ತೊಟ್ಟು ಕ್ಯಾನೆಸ್ ಫಿಲ್ಮಂ ಫೆಸ್ಟಿವಲ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ. 10 ದಿನಗಳ ಕಾಲ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಕನ್ನಡತಿ ಇತಿ ಆಚಾರ್ಯ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ.
ವಿಮ್ ವೆಂಡರ್ಸ್ ನಿರ್ದೇಶಿಸಿದ ಅನ್ಸೆಲ್ಮ್ ಸಿನಿಮಾಕ್ಕಾಗಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕುವ ಅವಕಾಶ ಇತಿ ಆಚಾರ್ಯ ಪಾಲಾಗಿದೆ. ಅದರಂತೆ ಕಪ್ಪು ಬಣ್ಣದ ಗೌನ್ ತೊಟ್ಟು, ಬೆಂಗಳೂರಿನ ಖಿಯಾ ಜ್ಯುವೆಲ್ಲರಿಯವರ ವಜ್ರದ ಆಭರಣ, ದೆಹಲಿ ಮೂಲದ ತಾರಿಣಿ ನಿರುಲಾ ಅವರ ಕರಕುಶಲ ಹಮ್ಮಿಂಗ್ ಬರ್ಡ್ ಕಪ್ಪು ಕೈ ಕ್ಲಚ್ ಹಿಡಿದು ಕ್ಯಾನೆಸ್ ನಲ್ಲಿ ರಂಗೇರಿಸಿದ್ದಾರೆ.
ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.