ಸೆನ್ಸಾರ್ ಮೆಚ್ಚಿದ ?ಪ್ರೀತ್ಸೆ ಪ್ರೀತ್ಸೆ
Posted date: 8/June/2009

ಮೋಹನ್ ಕುಮಾರ್.ಎನ್ ಅರ್ಪಿಸಿ, ಮೋಹನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಪ್ರೀತ್ಸೆಪ್ರೀತ್ಸೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರದಲ್ಲಿರುವ ಉತ್ತಮ ಅಂಶಗಳನ್ನು ಮಂಡಳಿ ಶ್ಲಾಘಿಸಿದೆ ಎಂದು ನಿರ್ಮಾಪಕ ಕೃಷ್ಣಯ್ಯ ತಿಳಿಸಿದ್ದಾರೆ.
    ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ಯೋಗೀಶ್ ಈ ಚಿತ್ರದ ನಾಯಕ. ‘ದುನಿಯಾ ಚಿತ್ರದಲ್ಲಿ ‘ಲೂಸ್ ಮಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೂರೆಗೊಂಡ ಯೋಗೀಶ್ ‘ನಂದಾ ಲವ್ಸ್ ನಂದಿತಾ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಆಗಮಿಸಿದರು. ಇವರ ಅಭಿನಯದ ‘ಅಂಬಾರಿ ಚಿತ್ರ ಕೂಡ ಶತದಿನೋತ್ಸವ ಆಚರಿಸಿಕೊಂಡಿದೆ.

‘ಪ್ರೀತ್ಸೆ ಪ್ರೀತ್ಸೆ  ಚಿತ್ರವೂ    ಉತ್ತಮವಾಗಿ ಮೂಡಿ ಬಂದಿದ್ದು ಜನ ಮನ್ನಣೆಗೆ ಪಾತ್ರವಾಗಲಿದೆ ಎಂದು ಯೋಗೀಶ್ ಅಭಿಪ್ರಾಯ ಪಟ್ಟಿದ್ದಾರೆ.
     ಕೆ.ಮಾದೇಶ್ ಅವರ ಚಿತ್ರಕತೆ, ನಿರ್ದೇಶನವಿರುವ ಈ ಚಿತ್ರಕ್ಕೆ ಅನುಪ್ ಸೀಳಿನ್ ಸಂಗೀತವಿದೆ. ವೀನಸ್ ಮೂರ್ತಿ ಛಾಯಾಗ್ರಹಣ, ತ್ರಿಭುವನ್, ಇಮ್ರಾನ್ ನೃತ್ಯ, ತಿರುಪತಿ ರೆಡ್ಡಿ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಸುರೇಶ್ ಗೋಸ್ವಾಮಿ ಕಥೆ-ಸಹನಿರ್ದೇಶನ ಹಾಗೂ ಚಂದ್ರಪ್ಪನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಉದಯತಾರಾ, ಪ್ರಜ಼್ಞ, ಜೈಜಗದೀಶ್, ಸಂಗೀತಾ, ರಮೇಶ್ ಭಟ್, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed