ಹೊಟ್ಟೆಪಾಡು ಬರೀ ಭಿಕ್ಷುಕರ ಕಥೆಯಲ್ಲ -3/5 ***
Posted date: 26 Sun, Feb 2023 09:19:03 AM

ಭಿಕ್ಷುಕರ ಜೀವನ ಅವರ ಹಿನ್ನೆಲೆ, ಈ ಭಿಕ್ಷುಕ ಎಂಬ ಪದವನ್ನೇ ಬಂಡವಾಳವಾಗಿಸಿಕೊಂಡು ಬ್ಯುಸಿನೆಸ್‌ ಮಾಡುತ್ತಿರುವ ಜನರ ಕುರಿತಂತೆ ಕಥಾಹಂದರ ಇಟ್ಟುಕೊಂಡು ನಿರ್ಮಿಸಿರುವ ಚಿತ್ರ ಹೊಟ್ಟೆಪಾಡು. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಚಿತ್ರ ತನ್ನ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನು ಸೆಳೆಯುತ್ತಿದೆ.  ವಸಂತ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಅವರೇ ನಾಯಕನಾಗೂ ನಟಿಸಿದ್ದಾರೆ. ಜೊತೆಗೆ ಚಿತ್ರಕ್ಕೆ  ಸಂಗೀತ ನಿರ್ದೇಶನ ಕೂಡ  ಮಾಡಿದ್ದಾರೆ.

ಖಳನಾಯಕನ ಪಾತ್ರದಲ್ಲಿ ಶೋಭರಾಜ್ ಉತ್ತಮ ಅಭಿನಯ ನೀಡಿದ್ದಾರೆ. ವಿಶೇಷ ಪಾತ್ರ ನಿರ್ವಹಿಸಿರುವ ವಿನಯಪ್ರಸಾದ್ ಅವರ ಪಾತ್ರ ಚಿತ್ರಕಥೆಗೆ ಹೊಸತಿರುವು ನೀಡುತ್ತದೆ. ಚಿತ್ರದ ನಾಯಕಿಯಾಗಿ ಜಾಹ್ನವಿ ವಿಶ್ವನಾಥ್ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರೂಣೆಯಲ್ಲಿ ಹೊಸತನ ಪ್ರಯತ್ನಿಸಿರುವ ನಿರ್ದೇಶಕರು ಪ್ರೇಕ್ಷಕರನ್ನು ಎರಡೂವರೆ ಗಂಟೆಯವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ತನ್ಮಯ್ ಎಸ್.ಆನಂದಕುಮಾರ್ ಅವರ ಚಿತ್ರಕಥೆ, ಸಂಭಾಷಣೆ, ನೃತ್ಯನಿರ್ದೇಶನವಿರುವ ಈ ಚಿತ್ರಕ್ಕಿದೆ. ರವಿಬೆಳಗುಂದಿ ಅವರ ಕ್ಯಾಮೆರಾ ವರ್ಕ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು. ವಸಂತ್ ಪಾತ್ರಕ್ಕೆ ವಿವಿಧ ಶೇಡ್ ಇದ್ದರೂ ಅದಕ್ಕೆ ನ್ಯಾಯ ಒದಗಿಸಿದ್ದಾರೆ.   ತಾಯಿ ಪಾತ್ರದಲ್ಲಿ ಅಪೂರ್ವ ಅವರ ಪಾತ್ರಪೋಷಣೆ ಚೆನ್ನಾಗಿದೆ. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವವರಿಗೆ ಹೊಟ್ಟೆಪಾಡು ಹೆಚ್ಚಾಗೇ ರುಚಿಸುತ್ತದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed