ಅದಿತಿಪ್ರಭುದೇವ ನೆಚ್ಚಿನ ಪಿ.ವಿ.ಡಿಸೈನರ್ ಸ್ಟುಡಿಯೋ
Posted date: 14 Tue, Mar 2023 08:37:40 AM
`ಧೈರ್ಯಂ` ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಚೆಲುವೆ ಅದಿತಿಪ್ರಭುದೇವ ಮುಂದೆ ತಮ್ಮದೆ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ಇವರ ನೆಚ್ಚಿನ ಡಿಸೈನರ್ ಸ್ಟುಡಿಯೋ ಅಂದರೆ ಪಿ.ವಿ.ಡಿಸೈನರ್ ಸ್ಟುಡಿಯೋ ಅಂತ ಹೇಳಿಕೊಂಡಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನ ಜಯನಗರದಲ್ಲಿ ಎರಡನೇ ಶಾಖೆಯನ್ನು ಉದ್ಗಾಟನೆ ಮಾಡಿದರು. ನಂತರ ಮಾತನಾಡುತ್ತಾ ಕ್ರಿಯೆಟೇವ್ ಫೀಲ್ಡ್‌ದಲ್ಲಿ ಇಂತಹ ಸ್ಟುಡಿಯೋಗಳಿಗೆ ಹೆಚ್ಚು ಅವಕಾಶಗಳು ಸಿಗಲಿದೆ. ಅಲ್ಲದೆ ಇದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿ ಅನೇಕರಿಗೆ ಕೆಲಸ ಸಿಗುತ್ತದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇದೇ ರೀತಿಯ ಸ್ಟುಡಿಯೋಗಳು ಜಾಸ್ತಿ ಬರಬೇಕು. ಸತೀಶ್‌ಕುಮಾರ್ ತೆರೆದಿರುವ ಸ್ಟುಡಿಯೋ ಮುಂದೆ ಹೆಚ್ಚಿನ ಶಾಖೆಗಳು ಬರುವಂತಾಗಲಿ. ಬಿಡುವಿದ್ದಾಗ ನಾನು ಇಲ್ಲಿಗೆ ಬರುತ್ತೇನೆ. ಒಳ್ಳೆಯದಾಗಲಿ ಎಂದರು.
 
ಮಹಿಳೆಯರು ಮತ್ತು ಮಕ್ಕಳಿಗೆ ಅಂತಲೇ ಪ್ರಾರಂಭ ಮಾಡಿರುವ ಸ್ಟುಡಿಯೋದಲ್ಲಿ ವಿನೂತನ ರೀತಿಯ ಡ್ರೆಸ್‌ಗಳು ಲಭ್ಯವಿದೆ. ಇದನ್ನು ಬಾಡಿಗೆಗೆ ಕೊಡಲಾಗುವುದು ಹಾಗೂ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮದುವೆ, ಶುಭಕಾರ್ಯಗಳು, ಪ್ರಿ ವೆಡ್ಡಿಂಗ್, ಶೂಟಿಂಗ್ ಅಂತ ಬಂದರೆ ಇಲ್ಲಿಂದಲೇ ಡ್ರೆಸ್‌ಗಳನ್ನು ತೆಗೆದುಕೊಂಡು ಹೋಗುತ್ತಾರೆಂದು ಸತೀಶ್‌ಕುಮಾರ್ ಮಾಹಿತಿ ಹಂಚಿಕೊಂಡರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed