ಪ್ರಪಂಚದಾದ್ಯಂತದ ಕುತೂಹಲದಿಂದ ಕಾಯುತ್ತಿರುವ ಕನ್ನಡದ ಹೆಮ್ಮೆಯ``ಕಬ್ಜ``ಚಿತ್ರದ ಟ್ರೇಲರ್ ಮಾರ್ಚ್ 4 ರಂದು
Posted date: 02 Thu, Mar 2023 04:42:01 PM
ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ "ಕಬ್ಜ" ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಜಗತ್ತಿನಾದ್ಯಂತ ಜನಪ್ರಿಯವಾಗಿದೆ.  
 
ಈ ಚಿತ್ರದ ಟ್ರೇಲರ್ ಬಿಡುಗಡೆ ಯಾವಾಗ? ಎಂದು ಪ್ರಪಂಚದಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. "ಕೆ.ಜಿ.ಎಫ್" ಚಿತ್ರದ ನಂತರ ವಿಶ್ವದಾದ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿರುವ  ಚಿತ್ರ "ಕಬ್ಜ".
 
ಕೊನಗೂ ಎಲ್ಲರ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಸಮಯ ನಿಗದಿಯಾಗಿದೆ. 
ಮಾರ್ಚ್ 4 ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ `ಕಬ್ಜ`ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್  ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed